ಸಲಹೆ ಸೂಚನೆಗಳು
ಸಮರಸದಲ್ಲಿ ಬರೆಯುವಾಗ ಕೆಲವು ಸಲಹೆಗಳನ್ನು ದಯವಿಟ್ಟು ಗಮನದಲ್ಲಿಡಿ
೧) ಯೂನಿಕೋಡ್ ನಲ್ಲೇ ಬರೆಯಿರಿ.
೨) ನಿಮ್ಮ ಲೇಖನಗಳಲ್ಲಿ ಕನ್ನಡತನವಿರಲಿ. ಬೇರೆ ಭಾಷೆಯ ಬಳಕೆ ಅಗತ್ಯವಿದ್ದರೆ ಮಾತ್ರ ಉಪಯೋಗಿಸಿ.
೩) ಕಾಗುಣಿತ/ಅಕ್ಷರ ದೋಷ, ವ್ಯಾಕರಣದ ಬಗ್ಗೆ ಹೆಚ್ಚಿನ ಗಮನ ಹರಿಸಿ.
೪) ಚರ್ಚೆ ಅವಶ್ಯಕ. ಆದರೆ ಚರ್ಚೆ ನಿಂದನಾತ್ಮಕವಾಗಬಾರದು, ವೈಯಕ್ತಿಕ/ವ್ಯಕ್ತಿಗತ ಟೀಕೆಯಾಗಬಾರದು.ಚರ್ಚೆಯ ವಿಷಯ ವಸ್ತುನಿಷ್ಠವಾಗಿರಲಿ.
೫) ಸಾಧ್ಯವಾದೊಷ್ಟು ಧಾರ್ಮಿಕ ಚರ್ಚೆಗಳಿಂದ (ಯಾವುದೇ ಧರ್ಮದ ಬಗ್ಗೆ ಗೊತ್ತಿಲ್ಲದ್ದನ್ನು, ನಿಂದನಾತ್ಮಕವಾದದ್ದನ್ನು ಬರೆಯದಿರಿ) ದೂರವಿರಿ.
೬) ಸ್ವಂತದಲ್ಲದ್ದನು (ನಕಲನ್ನು) ಸೇರಿಸುವುದರಿಂದ ದೂರವಿರಿ.
೭) ಬೇರೆ ತಾಣಗಳಿಂದ/ವ್ಯಕ್ತಿಗಳಿಂದ ಮಾಹಿತಿ/ಫೋಟೋಗಳನ್ನು ಪಡೆದಾಗ ಆ ತಾಣದ/ವ್ಯಕ್ತಿಯ ಹೆಸರನ್ನು ಸೂಚಿಸಿ.
೮) ಅಸಂವಿಧಾನಕ ಭಾಷೆಯ ಪ್ರಯೋಗದ ಬಗ್ಗೆ ಎಚ್ಚರವಿರಲಿ.
೯) ವಿಕೃತ ಲೈಂಗಿಕತೆಯ ಬಗೆಗಿನ ಲೇಖನಗಳು, ಲೈಂಗಿಕತೆಯನ್ನು ಪ್ರಚೋದಿಸುವಂತಹ ಚಿತ್ರಗಳು ಬೇಡ.
೧೦) ಆರೋಗ್ಯಕರ ಚರ್ಚೆ, ಹೆಚ್ಚಿನ ತಿಳುವಳಿಕೆ, ಸಾಮರಸ್ಯ ಸಮಾಜ, ಸಮರಸ ಜೀವನ ನಮ್ಮ ಧ್ಯೇಯ. ನೆನಪಿರಲಿ.




ಸಮರಸ ಈ-ಪತ್ರಿಕೆ ಓದಿದೆ. ಉಪಯುಕ್ತವಾಗಿದೆ. ರಂಗಭೂಮಿಯ ಬಗೆಗೆ ತಿಳಿಸುವ ಒಂದು ಕಿಂಡಿ ಇದ್ದಿದ್ದರೆ ಚೆನ್ನಾಗಿತ್ತು.
ಆತ್ಮೀಯ ವೇಣುಗೋಪಾಲ್ ರವರೆ,
ಧನ್ಯವಾದಗಳು. ನಿಮ್ಮ ಉಪಯುಕ್ತ ಸಲಹೆಯನ್ನು ಸಮರಸದಲ್ಲಿ ಶೀಘ್ರವಾಗಿ ಅಳವಡಿಸುತ್ತೇವೆ.