ರಸವೇ ಜನನ.. ವಿರಸ ಮರಣ.. ಸಮರಸವೇ ಜೀವನ.. – ದ ರಾ ಬೇಂದ್ರೆ

ನಮ್ಮ ಬಗ್ಗೆ

ಕನ್ನಡದಲ್ಲಿ ಅಂತರ್ಜಾಲ ಓದುಗರ ಸಂಖ್ಯೆ ಅಪಾರ. ಈಗಾಗಲೇ ಅಂತರ್ಜಾಲದಲ್ಲಿ ಕನ್ನಡ ಓದುಗರಿಗಾಗಿ, ಅಪಾರ ವೆಬ್ ಸೈಟ್ ಗಳಿವೆ, ಬಹಳಷ್ಟು ಬ್ಳಾಗ್ ಗಳಿವೆ. ಬಹುತೇಕ ಎಲ್ಲದರಲ್ಲೂ ಉತ್ತಮ ಗುಣಮಟ್ಟದ, ಬರವಣಿಗೆ ಇದ್ದೇ ಇದೆ. ಆದರೆ ಗುಣಮಟ್ಟಕ್ಕೆ ಎಲ್ಲೆ ಇಲ್ಲ. ಬರವಣಿಗೆಯಲ್ಲಿ ಉತ್ತಮ ಗುಣಮಟ್ಟವನ್ನು ಕಾಯ್ದುಕೊಂದು, ಹೆಚ್ಚಿಸಿಕೊಂಡು, ಓದುಗರಿಗೆ ಅನೇಕ ವಿಷಯಗಳ (ನಾವು ಓದಿ, ಅನುಭವಿಸಿ ತಿಳಿದಿರುವ) ಮಾಹಿತಿಯನ್ನು ಕೊಡಲೆಂದು ಸೃಷ್ಟಿಯಾದದ್ದು ’ಸಮರಸ’.

ಓದುಗರು ಸಮರಸದಲ್ಲಿ ಬರೆಯಬಹುದಾದ ಸೌಲಭ್ಯ ಇದೆ. ನೀವು ನಿಮ್ಮ ಲೇಖನವನ್ನು(ಕಾವ್ಯ ,ಕಥೆ ಯಾವ ವಿಷಯವಾದರೂ ಸರಿ), ಬರಹದಲ್ಲಿ (ಅಥವಾ ಬೇರೆ ಯಾವುದಾದರೂ ಸರಿ, ಯೂನಿಕೋಡ್ ನಲ್ಲಿರಬೇಕು) ಬರೆದು editor@samarasa.net ಗೆ ಕಳುಹಿಸಿ. ನಿಮ್ಮ ಹೆಸರು ಮತ್ತು ವಿ-ಅಂಚೆ ವಿಳಾಸವನ್ನು ತಪ್ಪದೆ ಬರೆಯಿರಿ. 

ಮುಂದೆ ಓದುಗರು ಸಮರಸದೊಂದಿಗೆ ನೊಂದಾಯಿಸಿಕೊಂಡು ನೇರವಾಗಿ ಲೇಖನಗಳನ್ನು ಬರೆಯುವ ಸೌಲಭ್ಯವನ್ನೊದಗಿಸುವ ಚಿಂತನೆ ಇದೆ.

ಸಮರಸ ಜೀವನಕ್ಕೆ ಆರೋಗ್ಯಕರ ಚರ್ಚೆ ಅಗತ್ಯ, ಹಾಗೆಯೇ ನಮ್ಮ ಸಮರಸ ಲೇಖನಗಳಿಗೆ. ಎಲ್ಲಾ ಓದುಗರು ತಪ್ಪದೆ ಎಲ್ಲಾ ಲೇಖನಗಳಿಗೂ ತಮ್ಮ ಪ್ರತಿಕ್ರಿಯೆಗಳ ಮೂಲಕ ಚರ್ಚಿಸುವುದು ಒಳಿತು. ಅವಾಚ್ಯ ಶಬ್ದಗಳನ್ನು ದಯವಿಟ್ಟು ಬಳಸಬೇಡಿ. ಅವಾಚ್ಯ ಶಬ್ದಗಳಿದ್ದರೆ, ಪ್ರತಿಕ್ರಿಯೆಗಳನ್ನು ಪ್ರಮಾಣಿಕರಿಸುವಸುವ ಸಮಯದಲ್ಲಿ ತೆಗೆದು ಹಾಕಲಾಗುವುದು.

ನಾವು ತಡೆ ಹಿಡಿಯುವುದು ಅವಾಚ್ಯ ಶಬ್ದಗಳನ್ನಷ್ಟೇ! ನಿಮ್ಮ ವಿಚಾರಗಳನ್ನಲ್ಲ. ಪರ – ವಿರೋಧ ವಿಚಾರವುಳ್ಳ ಎಲ್ಲಾ ಲೇಖನಗಳಿಗೆ, ಪ್ರತಿಕ್ರಿಯೆಗಳಿಗೆ ಮುಕ್ತ ಸ್ವಾಗತ.

ನಿಮ್ಮ ಅಭಿಪ್ರಾಯಗಳನ್ನು, ಕುಂದು ಕೊರತೆಗಳನ್ನು ನಿಷ್ಠುರವಾಗಿ ಈ ವಿಳಾಸಕ್ಕೆ ಬರೆಯಿರಿ. editor@samarasa.net



ಪ್ರತಿಕ್ರಿಯಿಸಿ