ಕರ್ನಾಟಕ ರಾಜಕೀಯ ವರ್ತಮಾನ ಮತ್ತು ಭವಿಷ್ಯ | ಸಮರಸ

ರಸವೇ ಜನನ.. ವಿರಸ ಮರಣ.. ಸಮರಸವೇ ಜೀವನ.. – ದ ರಾ ಬೇಂದ್ರೆ

ಕರ್ನಾಟಕ ರಾಜಕೀಯ ವರ್ತಮಾನ ಮತ್ತು ಭವಿಷ್ಯ

ವಿಶೇಷ ಸಂಪಾದಕೀಯದ ಲೇಖಕರು: ವಿವೇಕ ಬೆಟ್ಕುಳಿ,  ಕುಮಟಾ

ಪ್ರಸ್ಥುತ ಕರ್ನಾಟಕದ ರಾಜಕೀಯ ಪುನ: ರಂಗೇರಿದೆ. ಕಾಂಗ್ರೇಸ್, ಬಿಜೆಪಿ, ಜನತಾದಳಗಳು ತಮ್ಮದೇ ಆದ ನಡವಳಿಕೆಯಿಂದ ಜನರಲ್ಲಿ ಚರ್ಚೆಗೊಳಪಡುತ್ತಿರುವುದು. ಈ ಸಂದರ್ಭದಲ್ಲಿ ರಾಜ್ಯದ ಜನರಲ್ಲಿ ರಾಜಕೀಯದ ಬಗ್ಗೆ ತಾತ್ಸಾರ ಉಂಟಾಗಿ ಎಲ್ಲರೂ ಕೊನೆಯಲ್ಲಿ ರಾಜಕೀಯವನ್ನು ಒಂದು ಮನರಂಜನೆಯನ್ನಾಗಿ ಮಾಡಿಕೊಂಡಿರುವುದು ಕಂಡು ಬರುತ್ತಿದೆ. ಮೌಲ್ಯಯುತ ರಾಜಕೀಯದ ಕೊಡುಗೆಯನ್ನು ನೀಡಿದ ಕರ್ನಾಟಕದ ಇಂದಿನ ರಾಜಕೀಯ ಸ್ಥಿತಿಯನ್ನು ಗಮನಿಸಿದರೇ ನಮ್ಮ ಸಮಾಜದ ಅಧ:ಪತನದ ಕುರುಹುಗಳು ಅಲ್ಲಿಂದಲ್ಲೇ ಕಂಡು ಬರುತ್ತಿವೆ. ಹಿಂದೆ ಬೇರೆ ರಾಜ್ಯದ ರಾಜಕೀಯದ ಸುದ್ದಿಯನ್ನು ಕಥೆಯಂತೆ ಕೇಳುತ್ತಿದ್ದ ಕರ್ನಾಟಕದ ಜನತೆ ಇಂದು ನಮ್ಮ ಎದುರಿಗೆ ರಾಜಕೀಯ ದೊಂಬರಾಟವನ್ನು ನೋಡುವ ಸ್ಥಿತಿ ಬಂದಿರುವುದು. ಈ ಸಂದರ್ಭದಲ್ಲಿ ಯಾರು ನಮ್ಮ ರಾಜ್ಯದಲ್ಲಿ ಹಿತವರು? ಎಂಬ ಪ್ರಶ್ನೇ ನಾವೇ ಹಾಕಿಕೊಂಡರೆ ಉತ್ತರ ಮತಹಾಕಿದ ನಾವೇ ಮೂರ್ಖರು ಎಂಬಂತೆ ಆಗಿರುವುದು. ಈ ಹಿನ್ನಲೆಯಲ್ಲಿ ಪ್ರಸ್ಥುತ ರಾಜಕೀಯ ಪಕ್ಷದ ಸ್ಥಿತಿಯನ್ನು ಈ ಕೆಳಗಿನಂತೆ ವಿಶ್ಲೇಷಿಸಲಾಗಿದೆ.
ಬಿಜೆಪಿ : ದಕ್ಷಿಣ ಕರ್ನಾಟಕದಲ್ಲಿ ಮೊದಲ ಬಾರಿಗೆ ಆಡಳಿತಕ್ಕೆ ಬಂದಾಗ ಕರ್ನಾಟಕದ ಜನತೆ ಹೊಸತನತ ಕನಸು ಕಂಡಿತು. ಈ ಕನಸು ಒಂದು ವರ್ಷದೊಳಗೆ ಹುಸಿಮಾಡಿರುವ ಕೀರ್ತಿ ಆಡಳಿತ ಪಕ್ಷಕ್ಕೆ ಸಲ್ಲುತ್ತಿರುವುದು. ರೈತರ ಮೇಲೆ ಗೋಲಿಬಾರ, ಆಂತರಿಕ ಭಿನ್ನಮತ, ಗಣದಣಿಗಳ ಹಿಡಿತದಲ್ಲಿ ಸರ್ಕಾರ, ಹಾಲಪ್ಪ ಪ್ರಕರಣ, ರೇಣುಕಾಚಾರ್ಯ ಪ್ರಕರಣ, ಸಂಪಂಗಿ ಪ್ರಕರಣ , ಬೇಕಾಬಿಟ್ಟಿ ಅಧಿಕಾರಿಗಳ ವರ್ಗಾವಣೆ,  ಇವೆಲ್ಲವೂ ಆಡಳಿತಾರೂಢ ಬಿಜೆಪಿಯ ಮೇಲಿನ ನಂಬಿಕೆ ಕಡಿಮೆಯಾಗಲು ಮುಖ್ಯ ಕಾರಣವಾಗಿರುವುದು. ಅಧಿಕಾರ ಬರುವುದೇ ದುಡ್ಡು ಮಾಡಲಿಕ್ಕೆ ಎಂಬ ರೀತಿ ವರ್ತಿಸುತ್ತಿರುವ ಬಿಜೆಪಿಯ ನಾಯಕರು ದುಡ್ಡಿನಿಂದ ಏನನಾದರೂ ಸಾಧಿಸುವೆವು ಎಂಬ ಮದದಲ್ಲಿ ಇರುವರು. ಹಿಂದಿನಿಂದ ಬಿಜೆಪಿ ಪಕ್ಷಕ್ಕೆ ಇದ್ದ ಮೌಲ್ಯ, ತತ್ವ, ಆದರ್ಶ ಈ ಎಲ್ಲವೂ ಈಗ ಕೇವಲ ಒಂದು ಆದರ್ಶ ಪಕ್ಷದ ಸಂವಿಧಾನ ಮಾತ್ರ ಆಗಿರುವುದು. ಅಂತಹ ಯಾವುದೇ ನಡವಳಿಕೆ ಬಿಜೆಪಿಯಲ್ಲಿ ಇಂದು ಇರುವುದಿಲ್ಲ.  ಇಂದು ಬಿಜೆಪಿ  ಭ್ರಷ್ಟಾಚಾರದ ಜನರ ಪಕ್ಷವಾಗಿ ಮಾರ್ಪಾಡಾಗಿರುವುದು..

ಕಾಂಗ್ರೆಸ್: ಅರ್ಧ ಶತಮಾನಗಳು ರಾಷ್ಟದಲ್ಲಿ ಆಡಳಿತ ನಡೆಸಿದರೂ, ಸಮುದ್ರಂತೆ ಇರುವ ಪಕ್ಷವಾದರೂ ಈ ಪಕ್ಷವನ್ನು ಬೇರೆ ರಾಜಕೀಯ ಪಕ್ಷದವರೇ ಇದನ್ನು ಮುನ್ನಡೆಸಬೇಕು.  ಕನಾಟಕದ ಕೆಪಿಸಿಸಿ ಅಧ್ಯಕ್ಷರು, ವಿರೋಧ ಪಕ್ಷದ ನಾಯಕರು ಇವರೆಲ್ಲರೂ ಮೂಲ ಜನತಾ ಪಕ್ಷದವರು. ಇವರು ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುವ ಸ್ಥಿತಿ ಬಂದಿರುವುದು ಎಂದರೆ ಈ ರಾಜಕೀಯ ಪಕ್ಷಕ್ಕೆ ಏನಾಗಿದೇ ಎಂದು ಹೇಳಬೇಕು. ಆಂತರಿಕ ಕಚ್ಚಾಟ, ಹುದ್ದೆಯ ಆಕಾಂಕ್ಷೆ, ನಿವೃತ್ತಿ ವಯಸ್ಸಾಗಿದ್ದರೂ ಇನ್ನೂ ಅಧಿಕಾರದ ಆಶೆ, ತೀರದ ಸಾಲು ಸಾಲು ನಾಯಕರ ದಂಡು, ಪ್ರತಿಯೊಂದಕ್ಕೂ ಹೈಕಮಾಂಡ ಎಂದು ಬಾಯಿಪಡಿದುಕೊಳ್ಳುವ ನಾಯಕರು ಈ ರೀತಿಯ ವಾತಾವರಣದಲ್ಲಿ ಕಾಂಗ್ರೆಸ್ ಎಂಬುದು ಹಳೆಯ ಹೊಸತನ ಇಲ್ಲದ ಸರ್ಕಸ್ ಕಂಪನಿಯಂತೆ ಆಗಿರುವುದು. ನೆರೆಗಾಗಿ ಸಂಗ್ರಹಿಸಿದ ದುಡ್ಡನ್ನು ಅನ್ಯ ಬಳಕೆಗೆ ವ್ಯಯಿಸಿರುವ ಪ್ರಕರಣ ಈ ಪಕ್ಷದ ಸಂಸ್ಕೃತಿಯನ್ನು ಬಿಂಬಿಸುವುದು.

ಜೆಡಿಎಸ್ : ರಾಜ್ಯದ ರಾಜಕೀಯದ ಪಾಠಶಾಲೆ. ಒಂದು ಹಂತದಲ್ಲಿ ನಾಯಕರನ್ನು ಬೆಳೆಸುವ ಕಾರ್ಯವನ್ನು ಮಾಡುತ್ತಿರುವ ಈ ಪಕ್ಷ ರಾಜ್ಯ ರಾಜಕೀಯದಲ್ಲಿ  ಏಕಪಾತ್ರ ಅಭಿನಯ ಮಾಡುವ ಸಾಮರ್ಥ್ಯ ಇರುವುದು ಇವರಿಗೆ ಮಾತ್ರ. ಅಧಿಕಾರವನ್ನು ಅನುಭವಿಸಿ ಯಾವಾಗ ಮಾತಿಗೆ ತಪ್ಪಿದರೋ ಅಂದೇ ಜೆಡಿಎಸ್ ಪಕ್ಷದ ವರ್ಚಸ್ಸು ಹೋಗಿಬಿಟ್ಟಿದೆ. ದುರಾಶೆಯಿಂದ ಕುಮಾರಸ್ವಾಮಿ ರಾಜ್ಯ ಬಿಟ್ಟು ರಾಷ್ಟದ ಕಡೆಗೆ ಹೆಚ್ಚೆ ಹಾಕಿರುವುದು, ನಾಯಕನಾಗಿ ರೇವಣ್ಣ ಬಂದಿರುವುದು, ಇನ್ನೂ ರಾಜ ರಾಜಕೀಯದಲ್ಲಿ ಹಸ್ತಕ್ಷೇಪ್ತ ಮಾಡುತ್ತಿರುವ ದೊಡ್ಡ ಗೌಡರು, ಈ ವಾತಾವರಣದಿಂದ  ಈ ಪಕ್ಷ ಅಂದರೆ ಏಕ ವ್ಯಕ್ತಿ ಕೃಪಾಪೋಷಿತ ನಾಟಕ ಮಂಡಳಿಯಾಗಿರುವುದು.

ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳು ಈ ರೀತಿಯಾಗಿದ್ದ ಮೇಲೆ ರಾಜ್ಯ ಹೇಗೆ ಸುಧಾರಣೆ ಆಗಲು ಸಾಧ್ಯ? ಯಾರು ಹಿತವರು ಈ ಮೂವರೊಳಗೆ? ಕಳ್ಳರಲ್ಲಿ  ಜನಪರ ಕಾಳಜಿ ಇರುವ ಕಳ್ಳರು  ಯಾರು ಎಂಬುದರ ಬಗ್ಗೆ ಚರ್ಚಿಸಲು ಇದು ಒಳ್ಳೆಯ ಸಂದರ್ಭವಾಗಿರುವದು. ಈ ಹಿನ್ನಲೆಯಲ್ಲಿ ಮೂರು ಪ್ರಮುಖ ರಾಜಕೀಯ ಪಕ್ಷಗಳು ಕೆಲವೊಂದು ಬದಲಾವಣೆಯನ್ನು ತಮ್ಮಲ್ಲಿ ಮಾಡಿಕೊಂಡರೆ ಬರುವ ಚುನಾವಣೆ ಸಂದರ್ಭದಲ್ಲಿ ಜನರತ್ತ ಹೋಗಲು ನಿಮ್ಮಲ್ಲಿ ನೈತಿಕತೆ ಇರುವುದು.

ಬಿಜೆಪಿ :
* ಆರೋಪ ಎದುರಿಸುತ್ತಿರುವ ಬಳ್ಳಾರಿ ಮಂತ್ರಿಗಳನ್ನು, ಸಂಪಂಗಿ,ಹಾಲಪ್ಪ, ರೇಣುಕಾಚಾರ್ಯ ಇವರನ್ನು ಪಕ್ಷದಿಂದ ಉಚ್ಚಾಟಿಸಿ.
* ಮಾನ್ಯ ಮುಖ್ಯಮಂತ್ರಿಗಳು ತಿಂಗಳಲ್ಲಿ ೧೦ ದಿನ ಉತ್ತರಕರ್ನಾಟಕ ಜಿಲ್ಲೆಯಲ್ಲಿ ಕಾಲ ಕಳೆಯಿರಿ.
* ಮುಖ್ಯವಾಗಿ ಇರುವ ಅಧಿಕಾರ ಅವಧಿಯಲ್ಲಿ  ಶುದ್ದ ಕುಡಿಯುವ ನೀರು, ವಸತಿ, ಸಮರ್ಪಕ ಆರೋಗ್ಯ ಸೇವೆ ನೀಡಲು ಮುಂದಾಗಿ.
* ಬೇರೆ ಪಕ್ಷದಿಂದ ಬಂದವರನ್ನು ಎಷ್ಟು ಬೇಕೋ ಅಷ್ಟಕೇ ಇರಿಸಿಕೊಳ್ಳಿ.
* ಮಠ,ದೇವಸ್ಥಾನ ಬಿಟ್ಟು ಬಡವರ ಮನೆ, ಮಕ್ಕಳ ಶಿಕ್ಷಣದ ಬಗ್ಗೆ ಗಮನ ನೀಡಿ.
* ಹಿಂದುತ್ವ ಪ್ರತಿಪಾದಿಸುವ ಮೊದಲು ಕರ್ನಾಟಕದ ಎಲ್ಲಾ ದೇಗುಲದಲ್ಲಿ ಸಹಪಂಕ್ತಿ ಭೋಜನಕ್ಕೆ ಚಾಲನೆ ನೀಡಿರಿ.

ಕಾಂಗ್ರೆಸ್ :
* ೬೫ ದಾಟಿದ ಎಲ್ಲಾ ನಾಯಕರಿಗೆ ನಿವೃತ್ತರಾಗಲೂ ತಿಳಿಸಿರಿ.
* ಕೃಷ್ಣ ಬೈರೇಗೌಡ, ದಿನೇಶ ಗುಂಡೂರಾವ್, ಮಹಿಮಾ ಪಟೇಲ್ ಇವರಂತಹ ಯುವಕರಿಗೆ ನಾಯಕತ್ವ ಬಿಟ್ಟು ಕೊಡಿ. ವಿಶ್ವನಾಥ, ವೀರಪ್ಪ ಮೋಯಿಲಿ ಇವರಂತವರು ಮಾರ್ಗದರ್ಶನ ನೀಡಿರಿ.
* ಆಂತರಿಕ ಭಿನ್ನಮತ ಬಿಟ್ಟು ದೂರದೃಷ್ಠಿಯನ್ನು ಇರಿಸಿಕೊಂಡು ಕಾರ್ಯನಿರ್ವಹಿಸಿರಿ.
* ಸರ್ಕಾರದ ಜನಪರ ಕಾರ್ಯಗಳಿಗೆ ಸ್ಪಂದಿಸುತ್ತಾ ರಚನಾತ್ಮಕ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಿರಿ.
* ಎಲ್ಲಾ ನಾಯಕರ ಸಂಪತ್ತನ್ನು ಘೋಷಣೆ ಮಾಡಿ ಉಳಿದ ರಾಜಕೀಯ ಪಕ್ಷದವರಿಗೆ ಮಾದರಿಯಾಗಿರಿ.

ಜೆಡಿಎಸ್ :
* ದೇವೇಗೌಡರು ರಾಜ್ಯ ರಾಜಕೀಯದಿಂದ ನಿವೃತ್ತರಾಗಿ ಸಂಪೂರ್ಣ ಜನಬ್ದಾರಿ ಕುಮಾರಸ್ವಾಮಿಗೆ ವಹಿಸಿರಿ.
* ಕುಮಾರಸ್ವಾಮಿಯವರು ಉತ್ತರಕರ್ನಾಟಕ ಜಿಲ್ಲೆಯಲ್ಲಿ ಹಳ್ಳಿ ಹಳ್ಳಿಗೆ ಹೋಗಿ ಒಂದು ವರ್ಷ ಪಕ್ಷ ಸಂಘಟನೆ ಮಾಡಿರಿ.
* ಸಾಮಾನ್ಯ ವ್ಯಕ್ತಿಯನ್ನು ನಾಯಕನನ್ನಾಗಿ ಮಾಡಲು ಸಾಮರ್ಥ್ಯ ಇರುವುದರಿಂದ ಅಂತಹ ವ್ಯಕ್ತಿಗಳ ಹುಡುಕಾಟ ನಿಮ್ಮ ಸಂಘಟನೆಯ ಒಂದು ಭಾಗವಾಗಿರಲಿ.
* ಬೇರೆ ಪಕ್ಷದವರ ಬಗ್ಗೆ ಟೀಕೆ ಮಾಡುವುದಕ್ಕಿಂತ ಜನರ ಸಮಸ್ಯೆಗಳನ್ನು ಅರ್ಥಪೂರ್ಣವಾಗಿ ಮಾಧ್ಯಮನ ಮೇಲೆ ಬಿಂಬಿಸಲು ಪ್ರಯತ್ನಿಸಿ. ಅದಕ್ಕಾಗಿಯೇ ಪಕ್ಷದ ಒಂದು ಗುಂಪನ್ನು ರಚಿಸಿ. ದತ್ತ, ನಾಣಯ್ಯ ಅವರಂತವರು ಆ ಗುಂಪಿನಲ್ಲಿ ಇರಲಿ.
* ಅಪ್ಪ, ಅಣ್ಣ, ಜಮೀರಂತಹ ಸ್ನೇಹಿತರು ಇವರನ್ನು ಒಂದು ಹಂತದ ವರೆಗೆ ಮಾತ್ರ ಸೇರಿಸಿ ನಿಮ್ಮ  ಉದ್ದೇಶ ಅಧಿಕಾರ ಸಿಗುವುದೋ ಬಿಡುವುದೋ ನಂತರ ಒಂದು ಒಳ್ಳೆ ಜನಪರ ರಾಜಕೀಯ ಸಂಘಟನೆಯನ್ನು ಹುಟ್ಟುಹಾಕುವುದಾಗಿರಲಿ.

ಎಲ್ಲಾ ರಾಜಕೀಯ ಪಕ್ಷದವರೂ ಭ್ರಷ್ಟರೇ, ಆದರೂ ರಾಜಕೀಯ ಸಂಘಟನೆಗೆ  ಜನರ ಬಗ್ಗೆ ಒಂದು ದೂರದೃಷ್ಟಿ ಇರಬೇಕು. ಕೇವಲ ಅಧಿಕಾರಕ್ಕಾಗಿ ಸಂಘಟನೆ ಮಾಡುವುದು ನಿಲ್ಲಬೇಕು. ಈ ಹಿನ್ನಲೆಯಲ್ಲಿ ರಾಜಕೀಯ ಪಕ್ಷಗಳು ತಮ್ಮಲ್ಲಿ ಕೆಲವು ಬದಲಾವಣೆ ಮಾಡಿಕೊಂಡರೆ ವ್ಯವಸ್ಥೆಯಲ್ಲಿ ಸುಧಾರಣೆ ಆಗಬಹುದು ಎಂದು ನಿರೀಕ್ಷೆಯನ್ನಾದರೂ ಇರಿಸಿಕೊಳ್ಳಬಹುದು ಅಲ್ಲವೇ?

ವಿವೇಕ ಬೆಟ್ಕುಳಿ,  ಕುಮಟಾ
vivekpy@gmail.com



2 ಪ್ರತಿಕ್ರಿಯೆಗಳು

  1. ಬಹಳ ಚೆನ್ನಾಗಿ ಮೂಡಿ ಬಂದಿದೆ ಲೇಖನ, ಆದ್ರೆ ತಮ್ಮ ಸಲಹೆಗಳಂತೆ ಅಥವಾ ಸತ್ಯಕ್ಕೆ ತಕ್ಕಂತೆ ನಡೆಯುವ ಮಂದಿ ಪಕ್ಷದಲ್ಲಿದ್ದಾರೆ ಅಂತೀರಾ??

  2. ಇಂದಿನ ರಾಜಕೀಯ ಪಕ್ಷಗಳ ಅವಲೋಕನ ವಸ್ತುನಿಷ್ಠವಾಗಿ, ಚೆನ್ನಾಗಿ ಮೂಡಿ ಬಂದಿದೆ. ಉತ್ತಮ ಸಲಹಗಳೇನೋ ಕೊಟ್ಟಿದ್ದೀರಿ! ಅವರಿಗೆ ಮಂದ ಕಿವಿ ಅಷ್ಟೆ!

ಪ್ರತಿಕ್ರಿಯಿಸಿ