ಗೂಗಲ್ ’ಲಿಪ್ಯಂತರ’ (transliteration) ಬುಕ್ ಮಾರ್ಕ್ ಲೆಟ್
ನೀವು ಸಮರಸದಲ್ಲಿ ಅಥವಾ ಯಾವುದೇ ಕನ್ನಡ ಅಂತರ್ಜಾಲ ಪುಟದಲ್ಲಿ, ಕನ್ನಡಲ್ಲಿ ಬರೆಯಲು ಏನು ಮಾಡುತ್ತೀರ?
ಈಗ ನಾವು ಯಾವುದೇ ಅಂತರ್ಜಾಲ ಪುಟದಲ್ಲಿ ಕನ್ನಡ ಬರೆಯುವುದು ಸುಲಭ. ನಾವೆಷ್ಟೋ ಸಮಯದಲ್ಲಿ ಯಾವುದೋ ಅಂತರ್ಜಾಲ ಪುಟದಲ್ಲಿ ಕನ್ನಡದಲ್ಲಿ ಪ್ರತಿಕ್ರಿಯೆ ಮಾಡಬೇಕೆನ್ನಿಸುತ್ತದೆ. ಒಮ್ಮೊಮ್ಮೆ ಸೋಮಾರಿತನ, ಕೆಲವೊಮ್ಮೆ ನಾವು ಬಳಸುತ್ತಿರುವ ಗಣಕಯಂತ್ರದಲ್ಲಿ ಬರಹದಂತಹ ಯೂನಿಕೋಡ್ ನಲ್ಲಿ ಬರೆಯಬಹುದಾದ ತಂತ್ರಾಂಶ ಇಲ್ಲದೆ ಹೋಗಬಹುದು. ಆಗ ಕನ್ನಡವನ್ನು ಇಂಗ್ಲಿಷ್ ನಲ್ಲೇ ಬರೆಯುವ ಕೆಟ್ಟ ಅಭ್ಯಾಸ ಬೆಳೆಸಿಕೊಂಡಿದ್ದೇವೆ. ಈಗ ಕನ್ನಡದಲ್ಲಿ ಬರೆಯುವುದಕ್ಕೆ, ಮೊದಲು ಬೇರೆ ತಂತ್ರಾಂಶದಲ್ಲಿ ಯೂನಿಕೋಡ್ ನಲ್ಲಿ ಬರೆದು ಅದನ್ನು ನಕಲು ಮಾಡಿ/ ಕತ್ತರಿಸಿ, ನಂತರ ಅಂಟಿಸುವಷ್ಟು ದೀರ್ಘ ಕೆಲಸವಲ್ಲ.
ಈಗ ನೀವು ಮಾಡ್ಬೇಕಿರುವುದಿಷ್ಟೆ. ಈ ಕೆಳಗಿನ ಕೊಂಡಿಯನ್ನು ಬಳಸಿ, ಗೂಗಲ್ ಬುಕ್ ಮಾರ್ಕ್ ಲೆಟ್ ಅನ್ನು ನಿಮ್ಮ ನೆಚ್ಚಿನ ಜಾಲಾಡಿ (ಜಾಲಾಡಿ ಇದನ್ನು Browser ಗೆ ಸಮಾನಾಂತರ ಕನ್ನಡ ನಾಮಪದವನ್ನಾಗಿ ನಾಮಕರಣ ಮಾಡೋಣವೆ?) ಗೆ ಹಾಕಿ. ಬಹಳ ಸುಲಭ. ೧ ನಿಮಿಷದ ಕೆಲಸ.
http://t13n.googlecode.com/svn/trunk/blet/docs/help_kn.html#StoreIE
ನಂತರ ಇದನ್ನು ಪರೀಕ್ಷಿಸಲು, ನಿಮ್ಮ ಜಾಲಾಡಿಯಲ್ಲಿ ಈ ಬುಕ್ ಮಾರ್ಕ್ ಲೆಟ್ ನ್ನು ಎನೇಬಲ್ ಮಾಡಿ. ಸಮರಸಕ್ಕೆ ಹೋಗಿ, ಮೇಲೆ ಹುಡುಕಲು ಇರುವ ’ಟೆಕ್ಸ್ಟ್ ಬಾಕ್ಸ್’ ಜಾಗದಲ್ಲಿ ಟೈಪ್ ಮಾಡಿ, ಆಂಗ್ಲದಿಂದ ಕನ್ನಡಕ್ಕೆ ಲಿಪ್ಯಂತರವಾಗುವುದನ್ನು ನೋಡಿ ಆನಂದಿಸಿ. ಹಾಗೆಯೇ ಪ್ರತಿಕ್ರೆಯಿಸುವ ಜಾಗದಲ್ಲೂ ಒಮ್ಮೆ ಪರೀಕ್ಷಿಸಿಬಿಡಿ.
ಚನ್ನವೀರ ಕಣವಿಯವರು ಹೇಳುವಂತೆ “ಹೆಸರಾಯಿತು ಕರ್ನಾಟಕ.. ಉಸಿರಾಗಲಿ ಕನ್ನಡ..”
ಸಂದೇಹಗಳನ್ನು ಕೆಳಗೆ ಚರ್ಚಿಸೋಣ.



