ಕನ್ನಡ ಲಿಪಿಯನ್ನು ವಿರೂಪಗೊಳಿಸುತ್ತಿರುವವರ ಗಮನಕ್ಕೆ! | ಸಮರಸ

ರಸವೇ ಜನನ.. ವಿರಸ ಮರಣ.. ಸಮರಸವೇ ಜೀವನ.. – ದ ರಾ ಬೇಂದ್ರೆ

ಕನ್ನಡ ಲಿಪಿಯನ್ನು ವಿರೂಪಗೊಳಿಸುತ್ತಿರುವವರ ಗಮನಕ್ಕೆ!

ಇದನ್ನು ಎಲ್ಲಾ ಕನ್ನಡ ಪುಸ್ತಕ ಪ್ರಕಾಶಕರ ಮತ್ತು ಸಾರ್ವಜನಿಕರ ಗಮನಕ್ಕೆ ತರಲು ಇಚ್ಛಿಸುತ್ತೇನೆ. ಇನ್ನು ಮುಂದಾದರೂ ಪುಸ್ತಕಗಳನ್ನು ಹೊರತರುವಾಗ ಸ್ವಲ್ಪ ಎಚ್ಚರಿಕೆಯಿಂದ ಟೈಪ್ ಮಾಡಲಿ ಎಂಬ ಉದ್ದೇಶದಿಂದಲೇ ಹೊರತು ಯಾರೋ ಒಬ್ಬ ಪ್ರಕಾಶಕನ ತಪ್ಪುಗಳನ್ನು ಎತ್ತಿ ಹಿಡಿದು ತೊರಿಸುವುದಕ್ಕಲ್ಲ!


ಕನ್ನಡವನ್ನು ಗಣಕಯಂತ್ರದಲ್ಲಿ ಟೈಪ್ ಮಾಡಲು ಅಂದವಾದ ಫಾಂಟ್‌ಗಳಿಲ್ಲ ಎಂಬ ಕೊರಗು ಮೊದಲಿನಿಂದಲೂ ಇದೆ! ಈ ಕೊರತೆ ಯೂನಿಕೋಡ್ ನಲ್ಲಿ ಟೈಪ್ ಮಾಡಲು ಸಹಾಯ ಮಾಡುವಂತಹ ತಂತ್ರಾಂಶಗಳಲ್ಲಿ ಸ್ವಲ್ಪ ಹೆಚ್ಚು, ಅಂದರೆ ಯೂನಿಕೋಡ್ ಕನ್ನಡ ಫಾಂಟ್ ಗಳು ಅತಿ ವಿರಳ.

ಈ ಕೊರತೆಯನ್ನು ಬಹುಮಟ್ಟಿಗೆ ನೀಗಿಸಿದ್ದ ತಂತ್ರಾಂಶ “ನುಡಿ”. ಆದರೆ ಇದು ಬಳಸುವುದು ANSI ಕೋಡ್‌ಗಳನ್ನ. ಯೋನಿಕೋಡಗಳ, ಆನ್ಸಿ ಕೋಡಗಳ ಚರ್ಚೆ ಸದ್ಯಕ್ಕೆ ಬೇಡ. ಆದರೆ ಈ ನುಡಿ ತಂತ್ರಾಂಶವನ್ನು ಬಳಸುತ್ತಿರುವ ಕನ್ನಡ ಪುಸ್ತಕೋದ್ಯಮದ ಪ್ರಕಾಶಕರು, ’ಪು’, ಪೂ, ಪೊ, ಪೋ ಸಂಯುಕ್ತಾಕ್ಷರಗಳನ್ನು ವಿರೂಪಗೊಳಿಸಿರುವುದು ಬಹಳ ಖೇದಕರವಾದ ಸಂಗತಿ. ನಮಗೆಲ್ಲರಿಗೂ ತಿಳಿದಿರುವಂತೆ ಪ ಅಕ್ಷರಕ್ಕೆ ಉ/ಒ/ಓ/ಒ ಕಾರವನ್ನು ಸೇರಿಸಿದಾಗ,”ಪ’ ಅಕ್ಷರದ ಕೆಳಮಧ್ಯಭಾಗದಿಂದ ಆ ಕೊಂಬುಗಳು/ಓತ್ವಗಳು ಶುರುವಾಗಬೇಕು ಆದರೆ ಈ ’ನುಡ” ತಂತ್ರಾಂಶ ಉಪಯೋಗಿಸಿ ಬರೆದಾಗ ಆ ಕೊಂಬುಗಳು ಪ ಅಕ್ಷರದ ಪಕ್ಕಕ್ಕೆ ಜೋಡಿಸಲಾಗುತ್ತವೆ.ನುಡಿ ತಂತ್ರಾಂಶದ ಫಾಂಟ್ ರೆಂಡರಿಂಗ್ ನಲ್ಲಿರುವ ಈ ತಪ್ಪನ್ನು ಇತ್ತೀಚಿನ ನುಡಿ ತಂತ್ರಾಂಶದಲ್ಲೇನಾದರೂ ಸರಿ ಮಾಡಿದ್ದಾರೇನೋ ಗೊತ್ತಿಲ್ಲ!

ಇತ್ತೀಚೆಗೆ ಬಿಡುಗದೆಯಾದ, ದೇಶಕಾಲದ ವಿಶೇಷ ಸಂಚಿಕೆ, ಭೈರಪ್ಪನವರ ಕವಲು ಪುಸ್ತಕಗಳ ಮೇಲೆ ಕಣ್ಣಾಡಿಸಿದರೆ ಈ ತಪ್ಪುಗಳು ಹೇರಳವಾಗಿ ಕಾಣಿಸಿ ಅಭಾಸವಾಗುತ್ತದೆ.

ನಾವೇನಾದರೂ ನಮ್ಮ ಶಾಲೆಗಳಲ್ಲಿ ಈ ರೀತಿ ಬರೆದದ್ದಾದರೆ ನಮ್ಮ ಮೇಷ್ಟ್ರುಗಳ ಬೆತ್ತದಿಂದ ಒದೆ ಬೇಳುತ್ತಿತ್ತು!

ಪರಿಹಾರ?

ಎರಡು ಮಾರ್ಗಗಳಲ್ಲಿ ಈ ತೊಂದರೆಯನ್ನು ನಿವಾರಿಸಬಹುದಾಗಿದೆ.

೧) ಯೂನಿಕೋಡ್ ನಲ್ಲಿ ಬರೆಯಬಹುದಾದ ಬರಹ ತಂತ್ರಾಂಶವನ್ನು ಉಪಯೋಗಿಸುವುದು. ಉತ್ತಮ ಫಾಂಟ್‌ಗಳಿಗಾಗಿ ನುಡಿ ತಂತ್ರಾಂಶಕ್ಕೆ ಅದನ್ನು ವರ್ಗಾಯಿಸಬೇಕೆಂದರೆ, “BARAHA CONVERT” ತಂತ್ರಾಂಶ ಉಪಯೋಗಿಸಿ ಯೂನಿಕೋಡ್‌ನಿಂದ ANSI ಕೋಡ್ ಗೆ ಮಾರ್ಪಡಿಸಿ ನುಡಿಯಲ್ಲಿ ಉಪಯೋಗಿಸಬಹುದು.

೨) ನುಡಿಯಲ್ಲೇ ಸರಿಯಾದ “ಪು” ಸೃಷ್ಟಿಸುವುದು ಹೇಗೆ?
ಪ ಮತ್ತು ವು ಗಳ ಸಹಾಯದಿಂದ ಸರಿಯಾದ ’ಪು’ ಅಕ್ಷರವನ್ನು ಸೃಷ್ಟಿಸಬಹುದಾಗಿದೆ.

ಈ ಕೆಳಗಿನ ಚಿತ್ರ ನೋಡಿ.


ಈಗಾಗಲೇ ತಪ್ಪು ’ಪು’ ಸಂಯುಕ್ತಾಕ್ಷರವನ್ನು ಟೈಪ್ ಮಾಡಿ ಆಗಿದ್ದರೆ, ಆ ಕಡತವನ್ನು ಮೈಕ್ರೋಸಾಫ್ಟ್ ಆಫೀಸಿನಲ್ಲಿ ತೆಗೆದು, ತಪ್ಪು ’ಪು’ ಅಕ್ಷರದ ಕೋಡನ್ನು ಸರಿ ’ಪು’ ಅಕ್ಷರದ ಕೋಡಿಗೆ ಒಂದೇ ಬಾರಿ ಹುಡುಕಿ ಬದಲಾಯಿಸಬಹುದು!



2 ಪ್ರತಿಕ್ರಿಯೆಗಳು

  1. ಗುರು,
    ಹೌದು ನಾನು ’ಪು’ ಅಕ್ಷರದ ಬಗೆಗಿನ ಅಭಾಸವನ್ನು ಕೆಲವು ಪುಸ್ತಕಗಳಲ್ಲಿ ಗಮನಿಸಿದ್ದೇನೆ.
    ತ೦ತ್ರಾ೦ಶವೊ೦ದರಲ್ಲಿನ ತಪ್ಪಿನ ಜೊತೆಗೆ ಅದಕ್ಕೆ ಪರಿಹಾರವನ್ನು ಸೂಚಿಸಿದ್ದೀಯ. ವ೦ದನೆಗಳು

  2. ತುಂಬಾ ಉಪಯುಕ್ತ ಮಾಹಿತಿ ಕೊಟ್ಟಿದ್ದೀರಿ…

    ಅದಕ್ಕೆ ಪರಿಹಾರವನ್ನೂ ಸೂಚಿಸಿದ್ದೀರಿ…

    ಧನ್ಯವಾದಗಳು..

ಪ್ರತಿಕ್ರಿಯಿಸಿ