ಮಹಿಳಾ ದಿನಾಚರಣೆಯ ಶುಭಾಶಯಗಳು
ಮಹಿಳಾ ದಿನಾಚರಣೆಗೆ ಸರ್ವರಿಗೂ ಸಮರಸದ ಶುಭಾಶಯಗಳು. ಇಂದು ಜಿ ಎಸ್ ಎಸ್ ರವರ ಈ ಕವನವನ್ನು ನೆನೆಸಿಕೊಳ್ಳುವುದಕ್ಕಿಂತಾ ಹೆಚ್ಚಿನದೇನನ್ನೂ ಬರೆಯಬೇಕೆಂದೆನೆಸುತ್ತಿಲ್ಲ..
ಸ್ತ್ರೀ – ಡಾ ಜಿ ಎಸ್ ಶಿವರುದ್ರಪ್ಪ
ಆಕಾಶದ ನೀಲಿಯಲ್ಲಿ
ಚಂದ್ರ – ತಾರೆ ತೊಟ್ಟಿಲಲ್ಲಿ
ಬೆಳಕನಿಟ್ಟು ತೂಗಿದಾಕೆ
ಹಸುರನುಟ್ಟ ಬೆಟ್ಟಗಳಲಿ
ಮೊಲೆಹಾಲಿನ ಹೊಳೆಯನಿಳಿಸಿ
ಬಯಲ ಹಸುರ ನಗಿಸಿದಾಕೆ
ಮರ ಗಿಡ ಹೂ ಮುಂಗುರಳನು
ತಂಗಾಳಿಯ ಬೆರಳ ಸವರಿ
ಹಕ್ಕಿಗಿಲಕಿ ಹಿಡಿಸಿದಾಕೆ
ಮನೆ ಮನೆಯಲಿ ದೀಪ ಮುಡಿಸಿ
ಹೊತ್ತು ಹೊತ್ತಿಗನ್ನವುಣಿಸಿ
ತಂದೆ ಮಗುವ ತಬ್ಬಿದಾಕೆ
ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಎಂದರೆ ಅಷ್ಟೆ ಸಾಕೆ?




ಇದು ನಮಗೆ ಪ್ರಾಥಮಿಕ-ಮಾಧ್ಯಮಿಕ ಶಾಲಾ ಪುಸ್ತಕದಲ್ಲಿ ಬಂದಿತ್ತು, ಮೊನ್ನೆ ನಾನೂ ಬಹಳ ನೆನೆಸಿ ಕೊಂಡೆ, ಚೆನ್ನಾಗಿದೆ!
ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದು ಯುಗಾದಿಯ, ಹೊಸವರ್ಷದ ಶುಭಾಶಯಗಳನ್ನು ಕೋರುತ್ತಿದ್ದೇನೆ, ಹೊಸವರ್ಷ ತಮಗೆಲ್ಲ ಸುಖ-ಸಮೃದ್ಧಿದಾಯಕವಾಗಿರಲಿ.