ಪ್ರಾಣಿಗಳಿಗಿರುವ ವೃತ್ತಿ ಬದ್ದತೆ ನಮಗ್ಯಾಕ್ಕೆ ಇಲ್ಲ?
(ಲೇಖಕರು : ವಿವೇಕ vivekpy@gmail.com)
ಅಧಿಕಾರ ಮತ್ತು ಅಂತಸ್ತಿನ ಬೆನ್ನು ಹತ್ತಿ ಕರ್ತವ್ಯ ಮರೆತಿರುವ ಜನಪ್ರತಿಗಳು, ಕಛೇರಿಯಲ್ಲಿ ಸರಿಯಾಗಿ ಕಾರ್ಯನಿರ್ವಹಿಸದ ಸಿಬ್ಬಂದಿಗಳು, ಕಛೇರಿ ವೇಳೆ ಮಲಗಿರುವ, ರೇಸ ಕೋರ್ಸಗೆ, ಬಾರಿಗೆ, ಮತ್ತು ಮ್ಯಾಚ್ ನೋಡಲು ಹೋಗಿರುವ ಸಿಬ್ಬಂದಿಗಳು, ಶಾಲೆಗೆ ಗೈರು ಹಾಜರಾದ ಶಿಕ್ಷಕರು, ವಾರಗಟ್ಟಲೆ ಅಂಗನವಾಡಿಗೆ ಬರದ ಶಿಕ್ಷಕಿ ಈ ಎಲ್ಲ ವಿಷಯಗಳು ಸುದ್ದಿಯ ರೂಪದಲ್ಲಿ ವಿವಿಧ ಮಾದ್ಯಮದಲ್ಲಿ ಬರುವುದನ್ನು ಎಲ್ಲರೂ ನೋಡಿರುವೆವು. ಇಂದಿನ ಜನಪ್ರತಿನಿಧಿಗಳು, ಬಹುತೇಕ ಎಲ್ಲಾ ಸರ್ಕಾರಿ ಮತ್ತು ಹೆಚ್ಚಿನ ಖಾಸಗಿ ಸಂಸ್ಥೆಗಳಲ್ಲಿ ಅಂದರೆ ಮನುಷ್ಯ ಕಾರ್ಯನಿರ್ವಹಿಸುವ ಹೆಚ್ಚಿನ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ವ್ಥತ್ತಿಯ ಬಗ್ಗೆ ಪ್ರಾಮಾಣಿಕತೆಯಿಂದ ಬದ್ದತೆಯಿಂದ ಕಾರ್ಯನಿರ್ವಹಿಸುವ ವ್ಯಕ್ತಿಗಳನ್ನು ಹುಡುಕಬೇಕಾದ ಪರಿಸ್ಥಿತಿ ಇತ್ತಿಚೀನ ದಿನದಲ್ಲಿ ಬಂದಿರುವುದು. ಉತ್ತಮ ಕಾರ್ಯನಿರ್ವಹಣೆಗಾಗಿ ಸಿಗಬೇಕಾದ ಪ್ರಶಸ್ತಿಗಳು, ಸನ್ಮಾನಗಳು ಇತ್ತೀಚೀನ ದಿನದಲ್ಲಿ ರಾಜಕೀಯ ವ್ಯಕ್ತಿಗಳ ಹಿಂಬಾಲಕರಿಗೆ ಸಿಗುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಈ ರೀತಿಯಾಗಿ ಮಾನವನ ಕಾರ್ಯನಿರ್ವಹಣೆಯ ಎಲ್ಲಾ ಕೇತ್ರದಲ್ಲಿಯೂ ವೃತ್ತಿ ಬದ್ದತೆಯ ಕೊರತೆಯೂ ಕಂಡು ಬರುವುದು. ಈ ಸಂದರ್ಭದಲ್ಲಿ ನಾವು ನಮ್ಮನ್ನು ಅವಲೋಕನ ಮಾಡಿಕೊಳ್ಳಬೇಕಾದ ಅಗತ್ಯತೆ ಇದೆ.
ಇಂತಹ ಸಂದರ್ಭದಲ್ಲಿ ಧಾರವಾಡ ಜಿಲ್ಲೆಯ ಧಾರವಾಡ ತಾಲ್ಲೂಕಿನಲ್ಲಿ ನಿಗದಿ ಪಂಚಾಯತಿಯ ಬಾಡ ಗ್ರಾಮದಲ್ಲಿ ಇಟ್ಟಂಗಿಯ ಭಟ್ಟಿಗಳಿವೆ. ಅಲ್ಲಿ ಇಟ್ಟಂಗಿಯನ್ನು ಅದನ್ನು ತಯಾರಿಸುವ ಸ್ಥಳದಿಂದ ಇನ್ನೊಂದು ಸ್ಥಳಗಳಿಗೆ ಸಾಗಿಸಲು ಜಮಖಂಡಿಯಿಂದ ಕೆಲವು ಕತ್ತೆಗಳು ಬಂದಿರುವವು ಅವುಗಳ ಕಾರ್ಯನಿರ್ವಹಣೆಯನ್ನು ಒಂದು ಸಾರಿ ನೋಡುವ ಅಗತ್ಯತೆ ಈ ಸಂದರ್ಭದಲ್ಲಿ ಸೂಕ್ತವೆನಿಸುವುದು.

ಇಟ್ಟಂಗಿಯನ್ನು ಹೊರಲು ಸಿದ್ದರಾಗುತ್ತಿರುವ ಕತ್ತೆಗಳು
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ೧೬ ಕತ್ತೆಗಳು ಈಗಾಗಲೇ ಧಾರವಾಡದ ನಿಗದಿ ಪಂಚಾಯಿತಿಯಲ್ಲಿರುವ ಇಟ್ಟಂಗಿ ಭಟ್ಟಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವವು. ನಿರ್ಧಿಷ್ಟ ಪಡಿಸಿದ ಒಂದು ಸ್ಥಳದಿಂದ ಇನ್ನೊಂದು ಸ್ಥಳಗಳಿಗೆ ೧೦೦೦ ಇಟ್ಟಂಗಿಗಳನ್ನು ಸಾಗಿಸಿದರೆ ೮೦ ರೂಪಾಯಿಯನ್ನು ನೀಡಲಾಗುವುದು. ಇಟ್ಟಂಗಿಯನ್ನು ಕತ್ತೆಗಳ ಮೈಮೇಲೆ ಹೇರಿದರೆ ಅಲ್ಲಿಂದ ನಿಗದಿ ಪಡಿಸಿದ ಸ್ಥಳಕ್ಕೆ ಹೋಗಿ ನಿಲ್ಲುವುದು ಅಲ್ಲಿ ಇಟ್ಟಂಗಿಯನ್ನು ಇಳಿಸಿದರೆ ಪುನ: ಇಟ್ಟಂಗಿಗಳು ಇರುವಲ್ಲಿ ಬಂದು ನಿಲ್ಲುವುದು. ಅಲ್ಲಿಂದ ಪುನ: ಇಟ್ಟಂಗಿಯನ್ನು ಹೇರಿಕೊಂಡು ನಿರ್ದಿಷ್ಟ ಪಡಿಸಿದ ಸ್ಥಳಕ್ಕೆ ಬರುವುದು. ಒಂದೆರಡು ಬಾರಿ ಕತ್ತೆಗಳಿಗೆ ದಾರಿಯನ್ನು ತೋರಿಸಿದರೆ ನಂತರ ಅವು ತಮ್ಮಷ್ಟಕ್ಕೆ ತಾವೇ ಹೋಗಿ ಬರುವುದು. ಕಾಲಕಾಲಕ್ಕೆ ನೀರು, ಆಹಾರ ಮತ್ತು ವಿರಾಮ ಇವುಗಳನ್ನು ನೀಡುತ್ತಾ ಇದ್ದರೇ ಕತ್ತೆಗಳು ತಮ್ಮಷ್ಟಕ್ಕೆ ತಾವು ಕಾರ್ಯನಿರ್ವಹಿಸುತ್ತಾ ಇರುವುದು. ಈ ಪ್ರಾಣಿಗಳ ವೃತ್ತಿ ಬದ್ದತೆಯನ್ನು ಮುಖ್ಯವಾಗಿ ನಮ್ಮ ಜನಪ್ರತಿನಿಧಿಗಳು ಮತ್ತು ಇತರ ಎಲ್ಲರೂ ಸಹಾ ಒಮ್ಮೆ ನೋಡಿಕೊಳ್ಳುವುದು ಉತ್ತಮ ಅಲ್ಲವೇ?

ಇಟ್ಟಂಗಿ ಹೊತ್ತು ಹೊರಟಿರುವ ಕತ್ತೆಗಳು
ನಮ್ಮ ಕೆಲಸದ ಮೇಲ್ವಿಚಾರಣೆಗೆ ಯಾರ ಅಗತ್ಯ ಇಲ್ಲ

ವಿವೇಕ
vivekpy@gmail.com




ನೀವೆಂದದ್ದು ಸರಿ.. ನಮ್ಮ ಕೆಲಸಕ್ಕೆ ನಾವೇ ಹೊಣೆ.. ಮೇಲ್ವಚಾರಣೆ ಅನಗತ್ಯ.. ಪ್ರಾಣಿಗಳಿಂದ ಕಲಿಯಬೇಕಾದ ಪಾಠವೇ ಇದು..
nodi
\ ಹಾಗೆ ವೃತ್ತಿಪರತೆ ಯಾವಾಗಲೂ ಮನುಷ್ಯರರಿಗೆ ಇರುವುವುದು ಕಡಿಮೆ ಉಪಮೆ ಚನ್ನಾಗಿದೆ.