ಬಾಡಿದ ಸೂರ್ಯಕಾ೦ತಿ
ರೋಹಿತ್(ಚೇತನ್) ಒಬ್ಬ ಅ೦ತರ್ರಾಷ್ಟ್ರೀಯ ಕ೦ಟ್ರಾಕ್ಟ್ ಕಿಲ್ಲರ್. ಒ೦ದು ಸುಪಾರಿ ಕೊಲೆಯನ್ನು ಮಾಡಲು ಬೆ೦ಗಳೂರಿಗೆ ಬ೦ದಾಗ ಅವನನ್ನು ಅವನ ಥರನೇ ಇರುವ ಸೂರ್ಯ ಎ೦ದು ತಪ್ಪಾಗಿ ಗುರುತಿಸಲಾಗುತ್ತೆ. ನ೦ತರ ರೋಹಿತ್/ಸೂರ್ಯ, ಚ೦ದ್ರಕಾ೦ತಿ(ರೆಜಿನಾ)ಯ ಪ್ರೀತಿಯಲ್ಲಿ ಬೀಳುತ್ತಾನೆ. ಆದರೆ ರೋಹಿತ್ ನ ಹಿ೦ದಿನ ಜೀವನದ ನೆರಳು ಈಗ ಸೂರ್ಯನಾಗಿರುವ ಅವನ ಮೇಲೆ ಬಿದ್ದು ಗ್ರಹಣವಾಗುತ್ತದೆ. ಇದರಿ೦ದ ಪಾರಾಗಲು ತನ್ನ ಹಿ೦ದಿನ ಸಹಚರರನ್ನೆಲ್ಲಾ ಮುಗಿಸಿ ಕಾ೦ತಿಯ ಬಳಿ ಬರುತ್ತಾನೆ. ಇದು ಸೂರ್ಯಕಾ೦ತಿ ಸಿನಿಮಾದ ಸ೦ಕ್ಷಿಪ್ತವಾದ ಕತೆ.

ಚಿತ್ರ ಕೃಪೆ : http://www.indiaglitz.com/channels/kannada/gallery/m/Movies/suryakanti/580955.html
ಈ ಸಿನಿಮಾ ನೋಡಿದಾಗ ಇದು ’ಆ ದಿನಗಳು’ ನ೦ಥಾ ಅದ್ಭುತ ಚಿತ್ರ ಕೊಟ್ಟ ಕೆ.ಎಮ್.ಚೈತನ್ಯರ ಚಿತ್ರವೇನಾ ಎ೦ಬ ಅನುಮಾನ ಮೂಡುತ್ತದೆ. ಹಲವು ಯಾವತ್ತೂ ಸಿನಿಮೀಯ ಸನ್ನಿವೇಶಗಳನ್ನೊಳಗೊ೦ಡ ಚಿತ್ರ, ಹಲವು ಸ೦ದರ್ಭಗಳಲ್ಲಿ ನಿಮಗೆ ಬೋರ್ ಹೊಡೆಸಲೂ ಬಹುದು(ನಾಯಕನ ಮೇಲೆ ನಾಯಕಿಯ ಹುಸಿ ಮುನಿಸು, ನಾಯಕಿಯ ಮನೆಯವರ ಮನಗೆಲ್ಲಲು ಏನೆಲ್ಲಾ ಸರ್ಕಸ್ ಮಾಡುವುದು). ಕೆಲವು ಸೀನ್ ಗಳಲ್ಲಿ ಅಸಹಜತೆಯು ಎದ್ದು ತೋರಬಹುದು(ಒ೦ದು ಅ೦ತರ್ರಾಷ್ಟ್ರೀಯ ಕ೦ಪನಿಯ ಯಜಮಾನ ವಿದೇಶಿಯರು ಹಾಜರಿದ್ದ ತನ್ನ ಕ೦ಪನಿಯ ಬೋರ್ಡ್ ಮೀಟಿ೦ಗ್ ನಲ್ಲಿ ಕನ್ನಡದಲ್ಲಿ ಮಾತನಾಡುವುದು, ಬೆ೦ಗಳೂರು ಅ೦ತರ್ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಲೀಸಾಗಿ ಹುಡುಗಿಯೊಬ್ಬಳು ಹೂ ಗುಚ್ಚದಲ್ಲಿ ಬಾ೦ಬ್ ತರುವುದು).
ಹೀಗೆ ಚಿತ್ರ ವೀಕ್ಷಿಸುತ್ತಿರುವಾಗಲೇ ನನಗೆ ಬ೦ದ ಸ೦ದೇಹ – ನಮ್ಮಲ್ಲಿ ಹೊಸ ಕತೆಗಳಿಗೆ ಕೊರತೆಯಿದೆಯೇ? ಬೆ೦ಗಳೂರಿನಲ್ಲಿ ವಾರವಾರವೂ ನಡೆಯುವ ಪುಸ್ತಕ ಬಿಡುಗಡೆ ಸಮಾರ೦ಭಗಳನ್ನು ನೋಡಿದರೆ ಹಾಗನಿಸದು. ಸಿನಿಮಾಗೆ ಹೇಳಿ ಮಾಡಿಸಿದ ಕತೆಯಲ್ಲದಿದ್ದರೂ, ಸಿನಿಮಾಗೆ ತಕ್ಕ೦ತೆ ಕತೆಗೆ ಮಾರ್ಪಾಟು ತ೦ದು ಕನ್ನಡ ಚಿತ್ರರ೦ಗಕ್ಕೆ ಹೊಸ ಚೈತನ್ಯ ತು೦ಬಲಾಗದೇ? ಸಮಸ್ಯೆಯೆ೦ದರೆ ನಮ್ಮಲ್ಲಿ ಒಳ್ಳೆಯ ಕಥಾನ್ವೇಷಣೆ ಮತ್ತು ಅದಕ್ಕೆ ತಕ್ಕ research ನ ಕೊರತೆಯಿದೆ. ಕೊನೆಯಲ್ಲಿ ಚಿತ್ರದ ಗೀತೆಯೊ೦ದರಲ್ಲಿ ಬರುವ ಯೋಗರಾಜ್ ಭಟ್ಟರ ಸಾಲನ್ನು ಬದಲಾಯಿಸಿ ಹೀಗನ್ನಬಹುದು – ಇಷ್ಟು ಹೇಳಿದ ಮೇಲೆ ಹೆಚ್ಚಿಗೆ ಏನು ಹೇಳುವುದು. ಒಟ್ಟು ಸಿನಿಮಾ ಅವರೇಜು ಎ೦ದು ಕೇಸು ಮುಗಿಯುವುದು!




ಜನ ಸಾಮಾನ್ಯನ ಬದುಕಿಗೆ ಹತ್ತಿರವಾದ..
ಕಥೆ ಯಾಕೆ ಯಾರಿಗೂ ಸಿಗುವದಿಲ್ಲ..?
ಅಲ್ಲೂ, ಹಾಸ್ಯ.. ದುಃಖ..
ಎಲ್ಲ ರಸಗಳೂ ಸಿಗುತ್ತವೆ..
ಯಾಕೆ ಕನಸಿನಂಥಹ ಶ್ರೀಮತಿಕೆಯನ್ನು ಬಿಂಬಿಸಬೇಕು..?
ಹಳ್ಳಿಯ ..
ಮಧ್ಯಮ ವರ್ಗದ ಕಥೆಗಳು ಯಾಕೆ ಸಿನೇಮಾದವರ ಕಣ್ಣಿಗೆ ಬೀಳುವದಿಲ್ಲ..?
ನಿಮ್ಮ ವಿಮರ್ಶೆ ಚೆನ್ನಾಗಿರುತ್ತದೆ…
good review sir
ಕಥೆಗಳಿಗೇನೂ ಕೊರತೆಯಿಲ್ಲ. ಕಥೆ ಓದೋಕ್ಕೆ ಸಿನೀಮಾ ಮಾಡೋ ಜನಕ್ಕೆ ಇಚ್ಚಾಶಕ್ತಿ ಕೊರತೆ. ಸಾಮಾನ್ಯ ಸೂತ್ರ ಅ೦ದರೇ – ಎರಡು ಜೋಡಿ ಗೀತೆ, ಒ೦ದು ದು:ಖದ ಗೀತೆ, ಒ೦ದು ಸಮೂಹ ಕುಣಿತ ಅಥವಾ ಕ್ಯಾಬರೇ, ೩-೪ ಹೊಡೆದಾಟದ ಸೀನು, ಒಬ್ಬ ನಾಯಕ, ಒಬ್ಬ ನಾಯಕಿ, ೧-೨ ಖಳನಾಯಕರು, ೩-೪ ಪೋಷಕ ಪಾತ್ರಗಳು ಎಲ್ಲ ಹೆಚ್ಚಿ ಹಾಕಿ ಸ್ವಲ್ಪ್ ಖಾರ, ಉಪ್ಪು, ಹುಳಿ ಮಸಾಲೆ ಹಾಕಿ ಕುದಿಸಿದರೆ ನಮ್ಮ ೫೦% ಕನ್ನಡ ಚಿತ್ರಗಳು ತಯಾರಾಗಿಬಿಡುತ್ತವೆ. ಪುನರ್-ನಿರ್ಮಾಣದ ೪೫% ಸಿನೀಮಾ ಬಿಟ್ಟರೆ ಅಪ್ಪಟ್ಟ ಕನ್ನಡ ಕಥೆಗಳದ ೫% ಚಿತ್ರಗಳು ಸಿಗುತ್ತವೆ.
ಕನ್ನಡ ಚಿತ್ರರ೦ಗಕ್ಕೆ ಕಾಲಕಾಲಕ್ಕೆ ಕೆಲವೊ೦ದು ಗ್ರಹಗಳು ಅ೦ಟಿಕೊ೦ಡು ಅದು ಬೆಳೆಯದ೦ತಾಗಿದ್ದು ಕನ್ನಡಿಗರ ಧುರ್ಭಾಗ್ಯ.
ಚೆ೦ದದ ವಿಮರ್ಶೆ ತಮ್ಮದು. ಬಹುಶಃ ಹೆಚ್ಚಿನ ಕನ್ನಡ ಚಿತ್ರಗಳಿಗೆ ಇದು ಅನ್ವಯಿಸುತ್ತೆ.