ಹೆಚ್ಚು ಕನ್ನಡ ಸಾಹಿತ್ಯ ಮತ್ತು ಇತರೆ ಸಾಹಿತ್ಯದ ಸೊಗಡನ್ನು ಕಲೆ ಹಾಕಿ ಕರ್ನಾಟಕದ ಜನರಲ್ಲಿ ಓದುವ ಕಿಚ್ಚು ಹಚ್ಚಿಸುವುದು. ಕರ್ನಾಟಕದ, ಭಾರತೀಯ, ಜಾಗತಿಕ ಕಲೆಗಳನ್ನು ಜನರಿಗೆ ತಲುಪಿಸುವುದು. ಸುದ್ದಿಗಳನ್ನು, ಸಂಗತಿಗಳನ್ನು ವಿಮರ್ಶೆಗೆ ಒಳಪಡಿಸುವುದು, ವಿಚಾರ ಮಂಥನ ಮಾಡುವುದು ಮತ್ತು ಮುಕ್ತ ಚರ್ಚೆಗಳನ್ನು ಮಾಡಿ ತಿಳುವಳಿಕೆಯನ್ನು ವೃದ್ಧಿಸಿಕೊಂಡು ಸಮರನ ಜೀವನಕ್ಕೆ ಮುನ್ನುಡಿ ಬರೆಯುವುದು.
ಸಮಾಜ ಸೇವಾ ಸಂಸ್ಥೆ/ಸಮಿತಿಗಳಿಗೆ
ಲಾಭ ರಹಿತ ಸಮಾಜ ಸೇವಾ ಸಂಸ್ಥೆಗಳಿಗೆ ಸಮರಸದಲ್ಲಿ ಉಚಿತ ಜಾಹೀರಾತನ್ನು ನೀಡುತ್ತೇವೆ. ನಿಮ್ಮ ಸಂಸ್ಥೆಗೆ ದೇಣಿಗೆ ನೀಡಲು ಸಮರಸದಿಂದ ಓದುಗರಿಗೆ ಕೋರಿಕೆ ಸಲ್ಲಿಸುತ್ತೇವೆ. ನಿಮ್ಮ ವಿವರಗಳನ್ನು admin@samarasa.net ಗೆ ಕಳಿಸಿ.
ನಿಮ್ಮ ಕಾರ್ಯಕ್ರಮಗಳು
ಪುಸ್ತಕ ಬಿಡುಗಡೆ ಸಮಾರಂಭ, ಸಂಗೀತ ಕಾರ್ಯಕ್ರಮ, ನಾಟಕ, ಜನ್ಮೋತ್ಸವಗಳು, ಚರ್ಚೆಗಳು ಬೇರೆ ಇನ್ಯಾವುದೇ ಸಾರ್ವಜನಿಕ ಉತ್ಸವಗಳ ವಿವರಗಳನ್ನು ಜನರಿಗೆ ತಲುಪಿಸಬೇಕೆ? ನೀವು ಮಾಡಬೇಕಾದ್ದಿಷ್ಟೆ! ನಿಮ್ಮ ಕಾರ್ಯಕ್ರಮ, ಸಭೆ, ಸಮಾರಂಭದ ವಿವರಗಳನ್ನು admin@samarasa.net ಗೆ ಕಳುಹಿಸಿ. ಕಳುಹಿಸಿದವರ ಹೆಸರು, ವಿ-ಅಂಚೆ ಮತ್ತು ಸಂಚಾರಿ ದೂರವಾಣಿ ಸಂಖ್ಯೆ ಕಡ್ಡಾಯ. ಜೊತೆಗೆ ಕಾರ್ಯಕ್ರಮದ ಆಹ್ವಾನ ಪತ್ರಿಕೆಯ ನಕಲನ್ನು (ಸ್ಕ್ಯಾನ್ ಮಾಡಿ) ಕಳುಹಿಸದರೆ ಒಳಿತು. ನಿಮ್ಮ ಕಾರ್ಯಕ್ರಮದ ವಿವರಗಳನ್ನು ಓದುಗರಿಗೆ ತಟ್ಟನೆ ಕಾಣುವಂತೆ ಸಮರಸದಲ್ಲಿ ಹಾಕಲು ನೆರವಾಗುತ್ತೇವೆ. ೨ ದಿನ ಮುಂಚಿತವಾದರೂ ಕಳುಹಿಸಿದರೆ ಅನುಕೂಲ.