ಗೊರೂರು ರಾಮಸ್ವಾಮಿ ಅಯ್ಯಂಗಾರ್ ಜನ್ಮೋತ್ಸವ

ಹಿರಿಯ ಪ್ರಾಥಮಿಕ ಶಾಲೆಯ ಒಂದು ತರಗತಿಯಲ್ಲಿ ಒಂದು ಪಾಠ ನನಗೆ ಬಹಳ ಇಷ್ಟವಾಗಿತ್ತು. ತಿಳಿ ಹಾಸ್ಯದಿಂದ ಕೂಡಿದ ಆ ಪಾಠ, ಬಹಳ ಆಸಕ್ತಿ ಮೂಡಿಸಿದ್ದ ಕೆಲವೇ ಪಾಠಗಳಲ್ಲಿ ಒಂದು. ಅದನ್ನು ಬರೆದಿದ್ದವರು ಗೊರೂರು ರಾಮಸ್ವಾಮಿ ಅಯ್ಯಂಗಾರ್ ರವರು. ಆ ಪಾಠವನ್ನು ಗೊರೂರು ರಾಮಸ್ವಾಮಿ ಅಯ್ಯಂಗಾರರು ಬರೆದಿರುವ ಅಪೂರ್ವ ಪ್ರವಾಸ ಕೃತಿ “ಅಮೇರಿಕಾದಲ್ಲಿ ಗೊರೂರು” ನಿಂದ ಆರಿಸಿದ್ದು.
ಲೋಕೇಶ್ ಮತ್ತು ವಿಷ್ಣುವರ್ಧನ್ ಅಭಿನಯಿಸಿರುವ ’ಭೂತಯ್ಯನ ಮಗ ಅಯ್ಯು’ ಚಲನಚಿತ್ರ ನೋಡಿದ್ದೀರಲ್ಲವೆ. ಇಷ್ಟಪಟ್ಟಿರಲ್ಲವೇ. ಇದು ಕೂಡ ಗೊರೂರು ರಾಮಸ್ವಾಮಿ ಅಯ್ಯಂಗಾರ್ ರವರ ಸಣ್ಣ ಕಥೆ ’ಭೂತಯ್ಯನ ಮಗ ಅಯ್ಯು’ ಆಧರಿಸಿದ ಚಲನಚಿತ್ರ.
ಇಂದು ಗೊರೂರು ರಾಮಸ್ವಾಮಿ ಅಯ್ಯಂಗಾರ್ ರವರ ಜನ್ಮದಿನ. ಜನನ:೧೯೦೪, ಜುಲೈ ೪ರಂದು ಹಾಸನ ಜಿಲ್ಲೆಯ ಗೊರೂರಿನಲ್ಲಿ. ಮಹಾತ್ಮ ಗಾಂಧೀಜಿಯವರಿಂದ ಪ್ರಭಾವಿತರಾಗಿ, ವಿದ್ಯಾರ್ಥಿ ಜೀವನದಲ್ಲೇ ಸ್ವಾತಂತ್ರ ಚಳುವಳಿಯಲ್ಲಿ ಧುಮುಕಿದವರು. ನಂತರ ಕೆಲ ಕಾಲವನ್ನು ಗಾಂಧಿ ಆಶ್ರಮದಲ್ಲೂ ಕಳೆದರು. ಗಾಂಧೀಜಿಯವರ ಆದರ್ಶಗಳನ್ನು ಪಾಲಿಸುತ್ತಾ ಬಂದವರು.
ಬಹಳಷ್ಟು ಸಾಹಿತ್ಯ ಪ್ರಾಕಾರಗಳಲ್ಲಿ ವ್ಯವಸಾಯ ಮಾಡಿದ ಗೊರೂರು ರಾಮಸ್ವಾಮಿ ಅಯ್ಯಂಗಾರ್ ರವರಿಗೆ ಹೆಚ್ಚು ಹೆಸರನ್ನು ತಂದುಕೊಟ್ಟಿದ್ದು ಅವರ ಹಾಸ್ಯ ಶೈಲಿಯ ಬರವಣಿಗೆ. ಈ ಹಾಸ್ಯ ಅವರ ಕೃತಿಗಳಾದ “ನಮ್ಮೂರಿನ ರಸಿಕರು” ಮತ್ತು ಪ್ರವಾಸ ಕಥನ “ಅಮೇರಿಕಾದಲ್ಲಿ ಗೊರೂರು” ಕೃತಿಗಳಲ್ಲಿ ಕಂಡುಬರುತ್ತದೆ. ಅಮೇರಿಕಾದಲ್ಲಿ ಗೊರೂರು ಕೃತಿಗೆ ೧೯೮೦ ರ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಕೂಡ ಲಭಿಸಿದೆ. ನಮ್ಮೂರಿನ ರಸಿಕರು ಕೃತಿಯ ಮುನ್ನುಡಿಯಲ್ಲಿ ’ಡಿ ವಿ ಜಿ’ ಯವರು ಗೊ ರಾ ಅಯ್ಯಂಗಾರ್ ರವರ ಹಾಸ್ಯ ಪ್ರವೃತ್ತಿಯನ್ನು ಕೊಂಡಾಡುತ್ತಾರೆ.
’ಯಾಯಾತಿ’ ಖ್ಯಾತಿಯ ಮರಾಠಿ ಸಾಹಿತಿ ’ವಿ ಎಸ್ ಖಾಂಡ್ರೇಕರ್’ ರವರ ’ಕ್ರೌಂಚವಧ’ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿರುವುದು ವಿಶೇಷ.
ಗೊ ರಾ ಅಯ್ಯಂಗಾರ್ ರವರು ೧೯೮೨ ರಲ್ಲಿ ಶಿರಸಿಯಲ್ಲಿ ನಡೆದ ೫೫ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳಾನಧ್ಯಕ್ಷರಾಗಿದ್ದರು.
ಗೊ ರಾ ಅಯ್ಯಂಗಾರ್ ರವರ ಕೃತಿಗಳ ಕಿರು ದರ್ಶನ ಇಲ್ಲಿದೆ.
ಕಾದಂಬರಿಗಳು
ಮೆರವಣಿಗೆ
ಊರ್ವಶಿ
ಹೇಮಾವತಿ (ಹೇಮಾವತಿ ಹರಿಜನೋದ್ಧಾರ ವಸ್ತುವುಳ್ಳ ಕೃತಿ. ಇದು ಚಲನಚಿತ್ರವಾಗಿಯೂ ಹೆಸರು ಮಾಡಿದೆ)
ಜನಪದ ಸಾಹಿತ್ಯ
ಹಳ್ಳಿಯ ಹಾಡುಗಳು
ಹಳ್ಳಿಯ ಬಾಳು
ಜನಪದ ಜೀವನ ದರ್ಶನ
ಕಥಾ ಸಂಕಲನಗಳು
ವೈಯ್ಯಾರಿ
ಸೀತಮ್ಮನ ಸಾಹಸ
ಗರುಡಗಂಬದ ದಾಸಯ್ಯ
ನಮ್ಮ ಊರಿನ ರಸಿಕರು
ಮಹಿಷಾಸುರ ಕಾಳಗ
ಶಿವರಾತ್ರಿ
ಆಶೀರ್ವಚನ
ಕಮ್ಮಾರ ವೀರಭದ್ರಾಚಾರಿ
ಬಲಿದಾನ
ಬೆಸ್ತರ ಕರಿಯ
ಬೆಟ್ಟದ ಮನೆಯಲ್ಲಿ ಮತ್ತು ಇತರ ಕಥೆಗಳು
ಪ್ರಾಯಶ್ಚಿತ್ತ
ಹೇಮಾವತಿಯ ತೀರದಲ್ಲಿ ಮತ್ತು ಇತರ ಪ್ರಬಂಧಗಳು
ಕನ್ಯಾಕುಮಾರಿ ಮತ್ತು ಇತರ ಕಥೆಗಳು
ಗೋಪುರದ ಬಾಗಿಲು
ಉಸುಬು
ಕನ್ಯಾಕುಮಾರಿ ಮತ್ತು ಇತರ ಕಥೆಗಳು
ಪ್ರವಾಸ ಕಥನ
ಅಮೇರಿಕಾದಲ್ಲಿ ಗೊರೂರು
ಅನುವಾದಿತ ಕೃತಿಗಳು
ಕ್ರೌಂಚವಧ
ರಾಜ ನರ್ತಕಿ
ಕೊನೆಷ್ಟೈ ಹಾಸ್ಯ ಕಥೆಗಳು ( ತಮಿಳು ಅನುವಾದಿತ)
ಮುನ್ಶಿಯವರ ಭಗವಾನ್ ಕೌಟಿಲ್ಯ
ಗೊರೂರರು ೧೯೯೧, ಸೆಪ್ಟೆಂಬರ್ ೮ರಂದು ನಿಧನರಾದರು




Uttama Lekhana. Heege Kannada Sahiti gala kiru parichaya maduvanta lekahanagalu moodi barali
ಗಾ೦ಧೀಜಿಯವರ ಆತ್ಮಕಥೆ ‘My Experiments with Truth’ ಅನ್ನು ಕನ್ನಡಕ್ಕೆ ತ೦ದವರೂ ಇವರೇ.
ವಿವೇಕ್
ತಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು. ಹೆಚ್ಚು ಹೆಚ್ಚು ಕನ್ನಡ ಕವಿಗಳ ಲೇಖನ ಮಾಲೆ ಶೀಘ್ರದಲ್ಲೇ ಆರಂಭವಾಗಲಿದೆ
ರೆವೀಶ್,
ಹೆಚ್ಚಿನ ಮಾಹಿತಿಗೆ ಧನ್ಯವಾದಗಳು.
i want character sketch of namma uurina rasikaru