ನೆನ್ನೆ ವಿಜ್ಞಾನೋತ್ಸವದಲ್ಲಿ | ಸಮರಸ

ರಸವೇ ಜನನ.. ವಿರಸ ಮರಣ.. ಸಮರಸವೇ ಜೀವನ.. – ದ ರಾ ಬೇಂದ್ರೆ

ನೆನ್ನೆ ವಿಜ್ಞಾನೋತ್ಸವದಲ್ಲಿ

ವಿಜ್ಞಾನೋತ್ಸವ

ಇಂದು ವಿಜ್ಞಾನೋತ್ಸವದಲ್ಲಿ ಮೊದಲಿಗೆ ಬೆಂಗಳೂರು ವಿಜ್ಞಾನ ಸಂಘದ ಅಧ್ಯಕ್ಷ ಡಾ ಎ ಹೆಚ್ ರಾಮ ರಾವ್ ಎಂದಿನಂತೆ ತಮ್ಮ ಹಾಸ್ಯ ಶೈಲಿಯಲ್ಲಿ ಕನ್ನಡದಲ್ಲಿ ಸ್ವಾಗತವನ್ನು ಕೋರಿದರು. ನಂತರ ಸೀತಾರಾಮ ಅಯ್ಯಂಗಾರ್ ರವರ ಜೀವನ ವೃತ್ತಾಂತ (ಆತ್ಮ ಕಥೆ) ಪುಸ್ತಕದ ಬಿಡುಗಡೆ ಕಾರ್ಯಕ್ರಮ ನೆರವೇರಿತು. ಈ ಪುಸ್ತಕದ ಲೇಖಕರು ಹೆಚ್ ಆರ್ ರಾಮಕೃಷ್ಣ ರಾವ್. (ಇವರು ಇದಲ್ಲದೆ ಎ ಪಿ ಜೆ ಅಬ್ದುಲ್ ಕಲಾಮ್ ಮತ್ತು ಆಲ್ಬರ್ಟ್ ಐನ್ ಸ್ಟೈನ್ ಆತ್ಮಕಥೆಗಳನ್ನೂ ಬರೆದಿದ್ದಾರೆ).ನಂತರ ಪುಸ್ತಕದ ಬಗ್ಗೆ ರಾಮಕೃಷ್ಣ ರಾವ್ ಮತ್ತು ಡಾ ಕಶ್ಯಪ್ ಕೆಲವು ಮಾತುಗಳನ್ನಾಡಿದರು.

ಡಾ ಎಸ್ ಸಿತಾರಾಮ ಅಯ್ಯಂಗಾರ್ ರವರ ವಿಜ್ಞಾನ ಮತ್ತು ಅಂತರ್ಜಾಲ ಸಲಕರಣೆಗಳು (Science and Cybertools) ಎಂಬ ವಿಷಯದ ಮೇಲೆ ಉಪನ್ಯಾಸವಿತ್ತು. (ಇದು ವಿಜ್ಞಾನೋತ್ಸವದ ೨೨೫೧ ನೇ ವಿಜ್ಞಾನ ಉಪನ್ಯಾಸ).

ಡಾ ಸೀತಾರಾಮ ಅಯ್ಯಂಗಾರ್ ರವರು ಹುಟ್ಟಿದ್ದು ಹೆಮ್ಮಿಗೆ ಗ್ರಾಮದಲ್ಲಿ. ನ್ಯಾಶನಲ್ ಕಾಲೇಜಿನ ಹಳೆಯ ವಿದ್ಯಾರ್ಥಿ. ಇಂದು ಲೂಯಿಯಾನ ವಿಶ್ವವಿದ್ಯಾಲಯ ಅಮೇರಿಕಾದಲ್ಲಿ, ಗಣಕ ತಂತ್ರ ವಿಭಾಗವನ್ನು ಕಟ್ಟಿ ಬೆಳೆಸಿ ಅದರ ಅಧ್ಯಕ್ಷರಾಗಿದ್ದಾರೆ. I E E E ಸಂಸ್ಥೆಯ ಸದಸ್ಯ. ಗಣಕ ತಂತ್ರ ವಿಭಾಗದಲ್ಲಿ ಬಹಳಷ್ಟು ಸಂಶೋಧನೆಗಳು ಇವರ ಹೆಸರಿನಲ್ಲಿವೆ.

ಸದ್ಯಕ್ಕೆ ಸೀತಾರಾಮ್ ಅಯ್ಯಂಗಾರ್ ರವರು ಸಂಶೋಧನೆಯಲ್ಲಿ ತೊಡಗಿರುವುದು ಅಂತರ್ಜಾಲದ ಭದ್ರತೆ ವಿಷಯಗಳಲ್ಲಿ. (secure cyberspace). ನ್ಯಾಶನಲ್ ಸೈನ್ಸ್ ಫೌಂಡೇಶನ್ ಅಮೇರಿಕಾದವರ ಸಹಯೋಗದೊಂದಿಗೆ ಲೂಯಿಯಾನ ಮಹಾವಿದ್ಯಾಲಯದ ಸೆಂಟರ್ ಫಾರ್ ಸೆಕ್ಯೂರ್ ಸೈಬರ್ ಸ್ಪೇಸ್ ವಿಭಾಗದಲ್ಲಿ ಸಂಶೋಧನೆ ನಡೆಯುತ್ತಿದೆ. ಇದಕ್ಕೆ ಬೇರೆ ಖಾಸಗಿ ಸಂಸ್ಥೆಗಳ ಸಹಭಾಗಿತ್ವವೂ ಇದ್ದು ಅವರ ಧನ ಸಹಾಯವೂ ಕೂಡ ಇದೆ. ಇಂತಹ ಸಂಶೋಧನೆಗೆ ಪ್ರತಿಭಾನ್ವಿತ ಭಾರತೀಯ ವಿದ್ಯಾರ್ಥಿಗಳನ್ನು ಆಕರ್ಷಿವುದು ಈ ಉಪನ್ಯಾಸದ ಒಂದು ಉದ್ದೇಶವಾಗಿತ್ತು ಕೂಡ.

Early prediction, Control of ananalous, behaviour in cyberspace ಈ ವಿಷಯಗಳ ಸುತ್ತ ಉಪನ್ಯಾಸ ಕೇಂದ್ರೀಕೃತವಾಗಿತ್ತು. keystroke dynamics ನ್ನು ಬಳಸಿ ಹೇಗೆ ಅಂತರ್ಜಾಲದ ದುರ್ಬಳಕೆ/ಬಳಕೆಯನ್ನು ಕಂಡು ಹಿಡಿಯಬಹುದು ಎಂಬ ವಿಷಯದ ಮೇಲೂ ಬೆಳಕು ಚೆಲ್ಲಿದರು. ಪ್ರತಿ ಮನುಷ್ಯನ ಸ್ಪಂದಿಸುವ/ವರ್ತಿಸುವ ಗುಣ (behavioural, biometric patterns) ವಿಶಿಷ್ಟವಾಗಿರುತ್ತದೆ. ಅವುಗಳು ಮಾತ್ರ ವಲ್ಲದೆ ಇರುವೆಗಳ ಸಾಮೂಹಿಕ ನಡೆದಾಟದ ಗುಣ, ಪಕ್ಷಿಗಳು ಗುಂಪಿನಲ್ಲಿ ಹಾರುವಾಗ ಅವುಗಳ ವರ್ತನೆಯನ್ನು ಕೂಡ ಅಧ್ಯಯನ ಮಾಡಿ ಸಂಶೋಧನೆಯಲ್ಲಿ ಬಳಸಿಕೊಳ್ಳಲಾಗುತ್ತಿದೆ ಎಂದರು.

ಈ ಸಂಶೋಧನೆಯ ಮತ್ತೊಂದು ಉಪಯೋಗವೆಂದರೆ, ಪ್ರಕೃತಿ ವಿಕೋಪಗಳನ್ನು ಬಹಳ ಮುಂಚಿತವಾಗಿ ಊಹಿಸಿ, ಅವುಗಳಿಂದ ಹೆಚ್ಚು ಹಾನಿಯಾಗದಂತೆ ನೋಡಿಕೊಳ್ಳುವುದು. ಹೀಗೆ ಬಹಳ ಕ್ಲಿಶ್ಠವಾದ ವಿಷಯವನ್ನು ಆದೊಷ್ಟೂ ಸರಳ ಆಂಗ್ಲ ಪದಗಳಲ್ಲಿ ಸಾಮಾನ್ಯರಿಗೆ ಅರ್ಥವಾಗುವಂತೆ ವಿವರಿಸಿದರು.

ಕೊನೆಗೆ ತುಲಜಪ್ಪ ರವರಿಂದ ವಂದನಾರ್ಪಣೆಯಾಯಿತು.

ಮುಂದಿನ ಕಾರ್ಯಕ್ರಮಗಳ ಪಟ್ಟಿಗೆ ಈ ಕೊಂಡಿಯನ್ನು ಬಳಸಿ. ಕಾರ್ಯಕ್ರಮ ಪಟ್ಟಿ

Tagged as:


ಪ್ರತಿಕ್ರಿಯಿಸಿ