ಕ್ರೀಡೆ – ಲೇಖನ ಮಾಲೆ ಬರಲಿದೆ! | ಸಮರಸ

ರಸವೇ ಜನನ.. ವಿರಸ ಮರಣ.. ಸಮರಸವೇ ಜೀವನ.. – ದ ರಾ ಬೇಂದ್ರೆ

ಕ್ರೀಡೆ – ಲೇಖನ ಮಾಲೆ ಬರಲಿದೆ!

kreedeಬಹುಷಃ ಮಾನವನ ಉಗಮದಿಂದಲೂ, ಕ್ರೀಡೆ ಮನುಶ್ಯನ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಮನರಂಜನೆಗಾಗಿ ಕ್ರೀಡೆಗಿಂತ ಮತ್ತೊಂದು ಉತ್ತಮವಾದ ಮಾಧ್ಯಮವಿಲ್ಲ.ದೇಹ ದಂಡನೆಗೆ ಕ್ರೀಡೆಗಿಂತ ಉತ್ತಮ ವ್ಯಾಯಾಮವಿಲ್ಲ. ಕ್ರೀಡಾ ತಾರೆಗಳು ನೋಡಲು ಬಹಳ ಆಕರ್ಷಕವಾಗಿರುತ್ತಾರೆ ಎಂಬುದಕ್ಕೆ ಎರಡು ಮಾತಿಲ್ಲ.ಮಾನಸಿಕ ಬೆಳವಣಿಗೆಗೆ, ವ್ಯಯಕ್ತಿಕ ವ್ಯಕ್ತಿ ವಿಕಸನಕ್ಕೆ ಕೂಡ ಆಟ ಆಡುವುದು ಉತ್ತಮ ಮಾರ್ಗ. ಹೋರಾಟ ಮನೋಭಾವ, ಕ್ರೀಡಾ ಮನೋಭಾವ ಬೆಳೆಸಿಕೊಳ್ಳುವುದಕ್ಕೆ ಕ್ರೀಡೆ ಬಹಳ ಸಹಾಯಕವಾಗಬಲ್ಲದು. ಇನ್ನು ನಮ್ಮ ಕ್ರಿಕೆಟ್ ಕ್ರೀಡಾಪಟುಗಳ ಸಂಪಾದನೆ, ದೄಶ್ಯ ಮಾಧ್ಯಮದವರು ಕ್ರೀಡೆಗಳನ್ನು ಬಿತ್ತರಿಸಿ ಜಾಹೀರಾತುಗಳಿಂದ ಗಳಿಸುತ್ತಿರುವ ಸಂಪತ್ತು ಕ್ರೀಡೆಯನ್ನು ಆಕರ್ಷಕ ವ್ಯವಹಾರವನ್ನಾಗಿ ಮಾಡಿರುವುದಕ್ಕೆ ದೊಡ್ದ ಉದಾಹರಣೆ.

ಇಷ್ಟೆಲ್ಲಾ ಧನಾತ್ಮಕ ಅಂಶಗಳಿದ್ದರೂ ನಮ್ಮ ದೇಶದಲ್ಲಿ ಕ್ರೀಡೆಗೆ ಅತಿ ಹೆಚ್ಚಿನ ಪ್ರಾಶಸ್ತ್ಯವಿಲ್ಲ. ಬಹಳ ಎಂದರೆ ಮಕ್ಕಳು ಗಲ್ಲಿ ಗಲ್ಲಿಗಳಲ್ಲಿ ಕ್ರಿಕೆಟ್ ಆಡಬಹುದು. ಇನ್ನುಳಿದಂತೆ ಕೆಲವೆಡೆ ಬ್ಯಾಡ್ಮಿಂಟನ್, ಲಗೋರಿ, ಕಳ್ಳ ಪೋಲೀಸ್, ಕುಂಟೆ ಬಿಲ್ಲೆ, ಚೌಕ ಬಾರ ಇತ್ಯಾದಿ. ಟೆನ್ನಿಸ್, ಬ್ಯಾಸ್ಕೆಟ್ ಬಾಲ್, ಫುಟ್ ಬಾಲ್, ಕಾರ್ ರೇಸ್, ಅಥ್ಲೆಟಿಕ್ಸ್ ಈ ಆಟಗಳನ್ನು ಆಡುವವರು ಅಥವಾ ವೃತ್ತಿಪರ ತರಬೇತಿ ಪಡೆಯುವವರು ಅತಿ ವಿರಳ ಎಂದೇ ಹೇಳಬಹುದು.ವೃತ್ತಿಯಾಗಿ ಇರಲಿ ಎಷ್ಟೋ ಜನ ಹವ್ಯಾಸಕ್ಕೂ ಆಟಗಳನ್ನು ಆಡದೆ ಇರುವುದು ಅತಿ ದುಃಖಕರ ಸಂಗತಿ ಎಂತಲೇ ಅನ್ನಬಹುದು.ಒಂದು ಆರೋಗ್ಯಕರ, ಸಮೃದ್ಧ ಸಮಾಜಕ್ಕೆ ಅತಿ ಹೆಚ್ಚು ಜನರು ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದು ಅತೀ ಅವಶ್ಯಕ.ಇದಕ್ಕೆ ಕ್ರೀಡೆಗಳ ಬಗ್ಗೆ ಆಸಕ್ತಿ ತಳೆಯುವಂತೆ ಮಾಡಕು, ಆಟ ಆಡಲು ಕಿಚ್ಚು ಹಚ್ಚಿಸಲು “ಕ್ರೀಡೆ – ಲೇಖನ ಮಾಲೆ” ಆರಂಭವಾಗುತ್ತಿದೆ. ಈ ಲೇಖನ ಮಾಲೆಯ ಪ್ರತೀ ಅಂಕಣದಲ್ಲೂ ಒಂದು ಕ್ರೀಡೆಯನ್ನು ಆಯ್ಕೆ ಮಾಡಿ ಆ ಕ್ರೀಡೆಯ ಮತ್ತು ಆ ಆಟದಲ್ಲಿ ತೊಡಗಿಸಿಕೊಂಡ ಕ್ರೀಡಾಪಟುಗಳ ರೋಚಕ ಮಾಹಿತಿಗಳ ಅವಲೋಕನವಿರುತ್ತದೆ.

ಲೇಖನ ಮಾಲೆ ಶೀಘ್ರದಲ್ಲೇ ಆರಂಭವಾಗಲಿದೆ.



2 ಪ್ರತಿಕ್ರಿಯೆಗಳು

  1. ಬಹಳ ಉತ್ತಮವಾದ ಪ್ರಯತ್ನ. ನಿಮ್ಮ ಲೇಖನಕ್ಕಾಗಿ ಕಾಯುತ್ತಿದ್ದೇನೆ. ಆದಷ್ಟು ಬೇಗ ಪ್ರಕಟಿಸಿ.

  2. ಶ್ರೀಧರ್ ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು. ಉತ್ಸಾಹಕ್ಕೆ ಸ್ವಾಗತ. ಶೀಘ್ರದಲ್ಲೇ ಪ್ರಕಟಿಸಲು ಪ್ರಯತ್ನಿಸುತ್ತೇವೆ.

ಪ್ರತಿಕ್ರಿಯಿಸಿ