ಹೊಸತನದ ಹರಿಕಾರರಿಗೆ ನೋಕಿಯಾ ಸವಾಲು | ಸಮರಸ

ರಸವೇ ಜನನ.. ವಿರಸ ಮರಣ.. ಸಮರಸವೇ ಜೀವನ.. – ದ ರಾ ಬೇಂದ್ರೆ

ಹೊಸತನದ ಹರಿಕಾರರಿಗೆ ನೋಕಿಯಾ ಸವಾಲು

ನೋಕಿಯಾ ಸವಾಲುನಿಮ್ಮ ಪ್ರತಿಭಾ ಪ್ರದರ್ಶನಕ್ಕೆ ನೋಕಿಯಾ ಚರ್ಚಾವೇದಿಕೆ ಅವಕಾಶ ಒದಗಿಸುತ್ತಿದೆ. ನೋಕಿಯಾ ಡೆವೆಲೊಪರ್ಸ್ ಕಾರ್ಯಕ್ರಮದಲ್ಲಿ, ನೋಕಿಯಾ ಮೊಬೈಲ್ ಫೋನ್ ಗಳ ಮೇಲೆ ಬಳಸಲಾಗುವಂತಹ ಅಂತರ್ಜಾಲ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸಿ, ನೋಕಿಯಾ ಚರ್ಚಾವೇದಿಕೆಗೆ ಕಳುಹಿಸಿ ಬಹುಮಾನ ಗೆಲ್ಲಬಹುದಾಗಿದೆ.

ನಾಲ್ಕು ವಿಭಾಗಳಲ್ಲಿ ತಂತ್ರಾಶ ಅಭಿವೃದ್ಧಿ ಪಡಿಸುವ ಸೌಲಭ್ಯವಿದೆ. ಜೂನ್ ೩೦ ಈ ಸವಾಲಿಗೆ ನೊಂದಾಯಿಸಿಕೊಳ್ಳಲು ಕೊನೆಯ ದಿನ. ಸೆಪ್ಟಂಬರ್ ೨೦೦೯ ರಲ್ಲಿ ವಿಜೇತರನ್ನು ಘೋಷಿಸಲಾಗುವುದು. ೨೫೦,೦೦೦ $ ಯು ಎಸ್ ಡಾಲರ್ ವರೆಗೂ ಬಹುಮಾನ ಗೆಲ್ಲುವ ಅವಕಾಶ.

ಈ ಕೊಂಡಿಯನ್ನು ಬಳಸಿ, ನೊಂದಾಯಿಸಿಕೊಳ್ಳಿ.
http://www.callingallinnovators.com/default.aspx

ಈಗಾಗಲೇ ಗಣಕ ಯಂತ್ರಗಳಿಗೆ ಬಹಳಷ್ಟು ಕನ್ನಡ ತಂತ್ರಾಂಶಗಳಿವೆ. ಈಗ ಇನ್ನೂ ಉತ್ತಮ ಗುಣಮಟ್ಟದ ತಂತ್ರಾಂಶಗಳು ಮೊಬೈಲ್ ಫೋನ್ ಗಳಿಗೆ ಬೇಕಲ್ಲವೆ? ಇನ್ನು ಮುಂದೆ ತಂತ್ರಙ್ನಾನ ಕ್ಷೇತ್ರವನ್ನು ಮುನ್ನಡೆಸುವುದು ಮೊಬೈಲ್ ಫೋನುಗಳು ಮತ್ತು ಅದಕ್ಕೆ ಪೂರಕವಾದ ದೂರಸಂಪರ್ಕ ತಂತ್ರಙ್ನಾನಗಳು. ಬನ್ನಿ ಕನ್ನಡ ತಂತ್ರಙ್ನರೇ ಈ ಅವಕಾಶವನ್ನು ಮೊಬೈಲ್ ಫೋನ್ ಗಳಲ್ಲಿ ಕನ್ನಡ ತಂತ್ರಾಂಶಗಳ ಬೆಳವಣಿಗೆಗೆ ಸದುಪಯೋಗಪಡಿಸಿಕೊಳ್ಳಬಹುದಲ್ಲವೆ?

Tagged as:


ಪ್ರತಿಕ್ರಿಯಿಸಿ