ಸಮರಸಕ್ಕೆ ಸ್ವಾಗತ | ಸಮರಸ

ರಸವೇ ಜನನ.. ವಿರಸ ಮರಣ.. ಸಮರಸವೇ ಜೀವನ.. – ದ ರಾ ಬೇಂದ್ರೆ

ಸಮರಸಕ್ಕೆ ಸ್ವಾಗತ

ಕಡಲ ತಡಿಯಲ್ಲಿ ಸಮರಸ

ಸಮಸ್ತ ’ಸಮರಸ’ ಓದುಗರಿಗೂ ನಮಸ್ಕಾರ. ’ಸಮರಸ’ ಮೊದಲ ಸಂಪಾದಕೀಯ ಲೇಖನಕ್ಕೆ ಸ್ವಾಗತ.

ಕನ್ನಡದಲ್ಲಿ ಅಂತರ್ಜಾಲ ಓದುಗರ ಸಂಖ್ಯೆ ಅಪಾರ. ಈಗಾಗಲೇ ಅಂತರ್ಜಾಲದಲ್ಲಿ ಕನ್ನಡ ಓದುಗರಿಗಾಗಿ, ಅಪಾರ ವೆಬ್ ಸೈಟ್ ಗಳಿವೆ, ಬಹಳಷ್ಟು ಬ್ಳಾಗ್ ಗಳಿವೆ. ಬಹುತೇಕ ಎಲ್ಲದರಲ್ಲೂ ಉತ್ತಮ ಗುಣಮಟ್ಟದ, ಬರವಣಿಗೆ ಇದ್ದೇ ಇದೆ. ಆದರೆ ಗುಣಮಟ್ಟಕ್ಕೆ ಎಲ್ಲೆ ಇಲ್ಲ. ಬರವಣಿಗೆಯಲ್ಲಿ ಉತ್ತಮ ಗುಣಮಟ್ಟವನ್ನು ಕಾಯ್ದುಕೊಂದು, ಹೆಚ್ಚಿಸಿಕೊಂಡು, ಓದುಗರಿಗೆ ಹೆಚ್ಚಿನ ವಿಷಯಗಳ (ನಾವು ಓದಿ, ಅನುಭವಿಸಿ ತಿಳಿದಿರುವ) ಮಾಹಿತಿಯನ್ನು ಕೊಡಲೆಂದು ಸೃಷ್ಟಿಯಾದದ್ದು ’ಸಮರಸ’.

ಸಾಮರಸ್ಯದ ಇಂದಿನ ಅಗತ್ಯವನ್ನು ಬಿಡಿಸಿ ಹೇಳುವ ಅಗತ್ಯವಿಲ್ಲ. ಜೀವನದಿಂದ ಹಿಡಿದು, ಸಾಹಿತ್ಯ, ಚರ್ಚೆ, ಧರ್ಮ ಎಲ್ಲದರಲ್ಲೂ ಸಾಮರಸ್ಯದ ಅವಶ್ಯಕತೆ ಇಂದಿನ ಅಗತ್ಯ. ಈ ನಿಟ್ಟಿನಿಂದಲೇ ಈ ಕನ್ನಡ ವೆಬ್ ಪೋರ್ಟಲ್ ಗೆ ’ಸಮರಸ’ ಎಂದು ನಾಮಕರಣ ಮಾಡಿದ್ದು. ಹೆಸರಿನ ಅಡಿಬರಹಕ್ಕೆ, ಸಮರಸ ಎಂದರೆ ತಟ್ಟನೆ ನೆನಪಿಗೆ ಬರುವುದು ಬೇಂದ್ರೆಯವರ ಪದ್ಯದ ಸಾಲು.

ಬೇಂದ್ರೆಯವರು ಕೌಟುಂಬಿಕ ಸಾಮರಸ್ಯವನ್ನು ಸಾರಲು ಬರೆದ “ನನ್ನ ಹಾಡು” ಪದ್ಯದ ಕೊನೆಯ ಚರಣ ಹೀಗಿದೆ,

ಹರುಷ ರಸವೆ
ಕರುಣದಸುವೆ
ಜೀವ ಧರ್ಮ ಧಾರಣಾ
ರಸವೆ ಜನನ
ವಿರಸ ಮರಣ
ಸಮರಸವೇ ಜೀವನ

ಇದನ್ನು ಕುಂಟುಂಬ ಸಾಮರಸ್ಯಕ್ಕಲ್ಲದೆ, ಜೀವನದ ಯಾವುದೇ ಮಗ್ಗಿಲಿಗೂ ಅನ್ವಯಿಸುವ ತತ್ವ ಇದು.

ಸಮರಸವನ್ನು ಓದಿ, ಆಂನಂದಿಸಿ, ಪ್ರ‍ೊತ್ಸಾಹಿಸಿ, ತಪ್ಪುಗಳನ್ನು ತಿದ್ದಿ ದೊಡ್ಡದಾಗಿ ಬೆಳೆಸುತ್ತೀರಿ ಎಂಬ ನಂಬಿಕೆಯೊಂದಿಗೆ ವಂದನೆಗಳು.

Tagged as: , ,


ಪ್ರತಿಕ್ರಿಯಿಸಿ